ಕರ್ನಾಟಕ

karnataka

ETV Bharat / state

ಫೆ. 27ರಂದು ಪ್ರಧಾನಿಯಿಂದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ: ಬಿ.ವೈ.ರಾಘವೇಂದ್ರ - ಈಟಿವಿ ಭಾರತ ಕನ್ನಡ

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮ ಫೆ.27ರಂದು ನಡೆಯಲಿದೆ.

B y Raghavendra
ಬಿ ವೈ ರಾಘವೇಂದ್ರ

By

Published : Feb 16, 2023, 4:05 PM IST

ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಮಾಹಿತಿ

ಶಿವಮೊಗ್ಗ: ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಗಾನೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣದ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿದರು.

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಟ್ಟು 600 ಕೋಟಿ ರೂ ವೆಚ್ಚ ತಗುಲಿದೆ. ಆಪರೇಷನ್ ಟೀಂ ಕಳೆದ ವಾರ ಇಲ್ಲಿಗೆ ಬಂದಿತ್ತು. ಇಂದು ಮತ್ತೆ ನಗರಕ್ಕೆ ಆಗಮಿಸಿದ್ದಾರೆ. ವಿಮಾನ ಹಾರಾಟಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ. ಲೈಸನ್ಸ್ ಸಿಗುವ ಕುರಿತು ಯಾವುದೇ ಅನುಮಾನ ಇಲ್ಲ. ಪ್ರಧಾನಮಂತ್ರಿಗಳು ಬಂದಾಗ ಅವರಿಂದಲೇ ಯಾವಾಗ ವಿಮಾನ ಹಾರಾಟ ನಡೆಸುತ್ತೇವೆ ಎಂಬುದರ ಬಗ್ಗೆ ಘೋಷಿಸಲಾಗುವುದು ಎಂದರು.

ಈಗಾಗಲೇ ಏರ್ಪೊರ್ಟ್ ಆಥಾರಿಟಿ ಆಫ್ ಇಂಡಿಯಾದವರು ಬಂದು ಹೋಗಿದ್ದಾರೆ. ಇನ್ನೂ ಅನೇಕ ಸಂಸ್ಥೆಗಳು ವಿಮಾನ ನಿಲ್ದಾಣಕ್ಕೆ ಬಂದು ತೆರಳಿದ್ದಾರೆ. ಮುಂದಿನ ಎರಡು ವಾರ ಅತ್ಯಂತ ವೇಗವಾಗಿ ಕೆಲಸ ಮಾಡಲಾಗುವುದು. ನಿಲ್ದಾಣದಲ್ಲಿ ಹಾರಾಟ ನಡೆಸಲು ಸ್ಟಾರ್ ಹಾಗೂ ಇಂಡಿಗೂ ಏರ್ ಲೈನ್ಸ್ ಒಪ್ಪಂದ ಮಾಡಿಕೊಂಡಿವೆ. ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ಹೋಗುವವರು ಮತ್ತು ಬರುವವರ ಕುರಿತು ಸರ್ವೇ ನಡೆಸಿ ನಂತರ ಇತರೆ ವಿಮಾನ ಸಂಸ್ಥೆಗಳು ಇಲ್ಲಿಗೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಹಲವು ಅಭಿವೃದ್ಧಿ ಕಾಮಗಾರಿಗೆ ಚಾಲನೆ:ರೈಲ್ವೆ ಕ್ಷೇತ್ರದಲ್ಲಿ ನಮ್ಮದು ಬಿ ಕೆಟಗರಿಯಲ್ಲಿದೆ. ಶಿವಮೊಗ್ಗ- ಶಿಕಾರಿಪುರ-ಠಾಣೆಬೆನ್ನೂರು ಮಾರ್ಗ ಕಾಮಗಾರಿಗೆ ಮೋದೀಜಿ ಶಂಕುಸ್ಥಾಪನೆ ಮಾಡುವರು. ಮೊದಲು ಹಂತದಲ್ಲಿ ಶಿವಮೊಗ್ಗ-ಶಿಕಾರಿಪುರ ರೈಲು ಮಾರ್ಗಕ್ಕೆ 555 ಎಕರೆ ಭೂಮಿ‌ ಅವಶ್ಯಕವಾಗಿದ್ದು, 421 ಎಕರೆ ಅರಣ್ಯ, 81 ಎಕರೆ ಸರ್ಕಾರಿ ಭೂಮಿ ಹಾಗೂ 48 ಎಕರೆ ಖಾಸಗಿ ಭೂಮಿ ಸ್ವಾಧೀನಕ್ಕೆ 68 ಕೋಟಿ ರೂ ನೀಡಿದೆ. ಇದರಲ್ಲಿ ನ್ಯಾಮತಿ ತಾಲೂಕು ಸಹ ಬರುತ್ತದೆ. ಒಟ್ಟು 612 ಕೋಟಿ ರೂ ವೆಚ್ಚವಾಗುತ್ತದೆ. ಕೋಟೆಗಂಗೂರು, ರಾಂಪುರ, ಮಲ್ಲಪುರ, ಕೊರ್ಲಹಳ್ಳಿ ಶಿಕಾರಿಪುರ ಮಾರ್ಗವಾಗಿ ರಾಣೆಬೆನ್ನೂರು ಸೇರ್ಪಡೆಯಾಗುತ್ತದೆ. ಕೋಟಿಗಂಗೂರಿನಲ್ಲಿ 76 ಕೋಟಿ ರೂ‌ ನಲ್ಲಿ‌ ಕೋಚಿಂಗ್ ಟರ್ಮಿನಲ್ ಸೇರಿ‌ 105 ಕೋಟಿ ರೂ ಮಂಜೂರಾಗಿದೆ. ರೈತರಿಗೆ 10 ಕೋಟಿ ರೂ ಪರಿಹಾರ ನೀಡಲಾಗಿದೆ. ಇದರ ಶಂಕುಸ್ಥಾಪನೆ ಕಾರ್ಯ ನಡೆಯುತ್ತದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ 1 ಸಾವಿರ ಕೋಟಿ ರೂ ಮೊತ್ತದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮೋದಿ ಅವರು ಶಂಕುಸ್ಥಾಪನೆ ಮಾಡಲಿದ್ದಾರೆ. ಇದೇ ವೇಳೆ ವಿದ್ಯಾನಗರದ ರೈಲ್ವೆ ಮೇಲ್ಸೇತುವೆ ಕಾಮಗಾರಿ, ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಲೋಕಾರ್ಪಣೆ ಮಾಡಲಿದ್ದಾರೆ. ಜಲ ಜೀವನ್ ಯೋಜನಯಡಿ ಕೊಳಾಯಿ ನೀರು ಸಂಪರ್ಕ ಯೋಜನೆಗೆ ಚಾಲನೆ ದೂರೆಯಲಿದೆ ಎಂದು ತಿಳಿಸಿದರು. 45 ಕೋಟಿ ರೂ ವೆಚ್ಚದಲ್ಲಿ ಕೆಎಫ್ಎಫ್​ನ ಹಾಲು, ಮಜ್ಜಿಗೆ ಪ್ಯಾಕಿಂಗ್ ಘಟಕ ಉದ್ಘಾಟನೆ ನಡೆಸಲಿದ್ದಾರೆ. ಏರ್ಪೋರ್ಟ್‌ನಲ್ಲಿಯೇ ಪ್ರಧಾನಿ ಮೊದಲಿಗರಾಗಿ ವಿಮಾನದಲ್ಲಿ ಬಂದು‌ ಇಳಿಯಲಿದ್ದಾರೆ. ಇದು ನಮಗೆ ಸಂತೋಷ ತಂದಿದೆ ಎಂದರು.

ಇದನ್ನೂ ಓದಿ:ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಸೂಚಿಸಿದ ಬಿ.ಎಸ್.ಯಡಿಯೂರಪ್ಪ

ABOUT THE AUTHOR

...view details