ಕರ್ನಾಟಕ

karnataka

ETV Bharat / state

ಹೆಚ್​ಡಿಕೆ ಸ್ವಂತ ಅಣ್ಣನಂತೆ, ಶಿವಮೊಗ್ಗ ಫುಲ್​ ಡೆವಲಪ್​ ಮಾಡ್ತೀನಿ... ಒಂದು ಅವಕಾಶ ಕೊಡಿ ಪ್ಲೀಸ್​ ಅಂದ್ರು ಮಧು ಬಂಗಾರಪ್ಪ - ಮಧುಬಂಗಾರಪ್ಪ

ನನ್ನ ಸ್ವತಃ ಅಣ್ಣನ ಸಾಮಾನರಾದ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ಇದೆ. ನಾನು ಸತತ ಎರಡು ಬಾರಿ ಸೋತಿದ್ದೇನೆ. ಈ ಬಾರಿ ನನಗೆ ಒಂದು ಅವಕಾಶ ನೀಡಿ, ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಮಧುಬಂಗಾರಪ್ಪ ಮನವಿ ಮಾಡಿದರು.

ಮಧುಬಂಗಾರಪ್ಪ

By

Published : Mar 29, 2019, 4:27 PM IST

ಶಿವಮೊಗ್ಗ:ರಾಜ್ಯದಲ್ಲಿ ನನ್ನ ಸ್ವತಃ ಅಣ್ಣನ ಸಾಮಾನರಾದ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ಇದೆ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಂದು ಅವಕಾಶ ನೀಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಮಧುಬಂಗಾರಪ್ಪ ಮನವಿ ಮಾಡಿದ್ದಾರೆ.

ಮಧುಬಂಗಾರಪ್ಪ

ನಗರದ ಪ್ರೆಸ್​ಟ್ರಸ್ಟ್​ನಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮಧುಬಂಗಾರಪ್ಪ, ನಾನು ಸತತ ಎರಡು ಬಾರಿ ಸೋತಿದ್ದೇನೆ. ಹಾಗಾಗಿ ಈ ಭಾರಿ ಜಿಲ್ಲೆಯ ಮತದಾರರು ಆಶೀರ್ವಾದ ಮಾಡುವ ಮೂಲಕ ನನ್ನನ್ನು ಗೆಲ್ಲಿಸಿ. ಯಾಕೆಂದರೆ ಮಲೆನಾಡಿನ ಮೂಲಭೂತ ಸಮಸ್ಯೆಗಳ ಬಗ್ಗೆ ನನಗೆ ಗೊತ್ತು.ಹಾಗಾಗಿ ಈ ಭಾರಿ ಅವಕಾಶ ಮಾಡಿಕೊಟ್ಟರೆ ಸಂಸತ್ತಿನಲ್ಲಿ ಸಮಸ್ಯೆ ಗಳ ಕುರಿತು ಮಾತನಾಡಿ ಜಿಲ್ಲೆಯ ಅಭಿವೃದ್ಧಿ ಮಾಡುತ್ತೇನೆ. ಹಾಗೆ ನನ್ನ ಸ್ವತಃ ಅಣ್ಣನ ಸಮಾನರಾದ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಇರುವುದರಿಂದ ಎರಡು ವರ್ಷಗಳಲ್ಲಿ ಎಲ್ಲಾ ರೀತಿಯ ನೀರಾವರಿ ಯೋಜನೆಗಳನ್ನು ಮಾಡುತ್ತೇನೆ ಎಂದರು.

ಜನರಿಗೆ ಇರುವ ಕೃಷಿಗೆ ನೀರಾವರಿ ಸಮಸ್ಯೆನಗ್ಗೆ ನನಗೆ ತಿಳಿದಿದೆ. ನನ್ನ ಮೊದಲ ಆಧ್ಯತೆ ಜಿಲ್ಲೆಯ ಸಂಪೂರ್ಣ ನೀರಾವರಿ ಯೋಜನೆಗಳನ್ನ ಅನುಷ್ಠಾನಕ್ಕೆ ತರುವುದು.ಸ್ವತಃ ಅಣ್ಣನಿಗಿಂತ ಒಳ್ಳೆಯ ಅಣ್ಣನನ್ನ ಪಡೆದಿದ್ದೇನೆ. ಇಂತಹ ಅದೃಷ್ಟ ನನಗೆ ಸಿಕ್ಕಿರಲಿಲ್ಲ ಎಂದರು. ಅರಣ್ಯ ಹಕ್ಕು ಸಾಗುವಳಿ ಕಾನೂನನ್ನು ಬದಲಾವಣೆ ಮಾಡಬೇಕಿದೆ. ಹಾಗಾಗಿ ನಾನು ಶಾಸಕನಾಗಿದ್ದಾಗ ಈ ಕುರಿತು ವಿಧಾನ ಸಭೆಯಲ್ಲಿ ಮಾತನಾಡಿದ್ದೇನೆ. ಆಗ ಈ ಕುರಿತಾದ ಸಮಿತಿಯೊಂದನ್ನ ಶ್ರೀನಿವಾಸ್ ಪ್ರಸಾದ್ ನೇತೃತ್ವದಲ್ಲಿ ಮಾಡಲಾಗಿತ್ತು. ಆದ್ದರಿಂದ ನೀವು ಆಶೀರ್ವಾದ ಮಾಡಿದರೆ ಈ ಎಲ್ಲಾ ಸಮಸ್ಯೆಗಳನ್ನ ಪಾರ್ಲಿಮೆಂಟ್​ನಲ್ಲಿ ಚರ್ಚಿಸುತ್ತೇನೆ ಎಂದರು.

ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದಾಗ, ಸಾಲ ಮನ್ನಾ ಮಾಡುವುದು ಒಂದು ಕೆಟ್ಟ ಪದ್ದತಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದರು. ಮೋದಿಯವರು ನಮ್ಮೆಲ್ಲರ ಹೊಟ್ಟೆಗೆ ಅನ್ನ ಹಾಕುತ್ತಿರುವುದಾ ಅಥವಾ ರೈತರೆ ಎನ್ನುವುದು ನಿಮಗೆ ತಿಳಿದಿರಲಿ ಎಂದು ಟಾಂಗ್ ನೀಡಿದರು.

ABOUT THE AUTHOR

...view details