ಕರ್ನಾಟಕ

karnataka

ETV Bharat / state

ತಾಪಂ ಸಭೆಯಲ್ಲೇ ಪ್ಲಾಸ್ಟಿಕ್‌ ಬಾಟಲ್‌ಗಳ ಬಳಕೆ.. ಸರ್ಕಾರಿ ಆದೇಶಕ್ಕೆ ಕಿಮ್ಮತ್ತಿಲ್ಲ..

ಇಂದು ನಡೆದ ತಾಲೂಕು ಪಂಚಾಯತ್ ಕೆಡಿಪಿ ಸಭೆಯಲ್ಲಿ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಪ್ಲಾಸ್ಟಿಕ್ ನೀರಿನ ಬಾಟಲ್​ಗಳನ್ನು ಬಳಸಿದ್ದಾರೆ.

meeting
ಕೆಡಿಪಿ ಸಭೆ

By

Published : Dec 20, 2019, 5:35 PM IST

ಶಿವಮೊಗ್ಗ : ಸರ್ಕಾರದ ಆದೇಶದನ್ವಯ ಸರ್ಕಾರಿ ಕಚೇರಿ ಹಾಗೂ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್​ಗಳನ್ನು ನಿಷೇಧಿಸಲಾಗಿದ್ದರೂ ಶಿವಮೊಗ್ಗ ತಾಲೂಕು ಪಂಚಾಯತ್‌ನಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್​ಗಳನ್ನು ಬಳಸಿದ್ದಾರೆ.

ಇಂದು ನಡೆದ ತಾಲೂಕು ಪಂಚಾಯತ್ ಕೆಡಿಪಿ ಸಭೆಯಲ್ಲಿ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಪ್ಲಾಸ್ಟಿಕ್ ನೀರಿನ ಬಾಟಲ್​ಗಳನ್ನು ಬಳಸಿದ್ದಾರೆ. ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್​ ಅವರು ತಮ್ಮ ಮುಂದೆಯೇ ಪ್ಲಾಸ್ಟಿಕ್ ಬಾಟಲ್​ಗಳನ್ನು ಇಟ್ಟಿರುವುದು ಗಮನಕ್ಕೆ ಬಂದರೂ ಅದನ್ನು ನಿರ್ಲಕ್ಷ್ಯಿಸಿದ್ದು, ಸರ್ಕಾರದ ಆದೇಶಕ್ಕೆ ಶಾಸಕರ ಬೆಂಬಲ ಎಷ್ಟಿದೇ ಎಂಬುದನ್ನು ಸೂಚಿಸುತ್ತದೆ.

ತಾಲೂಕು ಪಂಚಾಯತ್‌ನಲ್ಲಿ ನಡೆದ ಕೆಡಿಪಿ ಸಭೆ..

ಅಷ್ಟೇ ಅಲ್ಲ, ಕೆಡಿಪಿ ಸಭೆ ನಡೆಯುತ್ತಿದ್ದರೂ ನಮಗೇನು ಅನ್ವಯಿಸುವುದಿಲ್ಲ ಎನ್ನುವಂತೆ ಬಹುತೇಕ ಅಧಿಕಾರಿಗಳು ಮೊಬೈಲ್ ಫೋನ್​ನಲ್ಲಿ ಮುಳುಗಿ ಹೋಗಿದ್ದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ, ವೇದಾವಿಜಯ್ ಕುಮಾರ್, ತಾಲೂಕು ಪಂಚಾಯತ್ ಅಧ್ಯಕ್ಷೆ ಗೀತಾ ಜಯಶೇಖರ್, ಉಪಾಧ್ಯಕ್ಷೆ ನಿರ್ಮಲಾ ಮೋಹನ್ ಕುಮಾರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details