ಶಿವಮೊಗ್ಗ: ಇಲ್ಲಿನ ಶಿಕಾರಿಪುರದ ಪರೋಪಕಾರಂ ತಂಡದ ವತಿಯಿಂದ 27ನೇ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಅರಸು ನಗರದಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರದ ಜಾಗೃತಿ ಕಾರ್ಯಕ್ರಮ ನಡೆಯಿತು.
ಪ್ಲಾಸ್ಟಿಕ್ ಮುಕ್ತ ಪರಿಸರ ಸ್ವಚ್ಛತಾ ಅಭಿಯಾನ - ಶಿವಮೊಗ್ಗದಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರ ಜಾಗೃತಿ
ಪರೋಪಕಾರಂ ತಂಡ ಹಮ್ಮಿಕೊಂಡಿದ್ದ 27ನೇ ಸ್ವಚ್ಛತಾ ಕಾರ್ಯಕ್ರಮವನ್ನು ಸಂಸದ ಬಿ.ಎಸ್.ರಾಘವೇಂದ್ರ ಚಾಲನೆ ನೀಡಿ, ಜಾಗೃತಿ ಮೂಡಿಸಿದರು.
ಸಂಸದ ಬಿಎಸ್.ವೈ.ರಾಘವೇಂದ್ರ
ಸಂಸದ ಬಿ.ವೈ ರಾಘವೇಂದ್ರ ಸ್ವಚ್ಛತಾ ಕಾರ್ಯಕ್ರಮದ ಕುರಿತು ಅರಿವು ಮೂಡಿಸಿದರು. ಈ ಸ್ವಚ್ಛತಾ ಅಭಿಯಾನದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
ತಹಶೀಲ್ದಾರ್ ಕವಿರಾಜ್, ಪುರಸಭೆ ಮುಖ್ಯಾಧಿಕಾರಿ ಮನೋಹರ್, ಸಿ.ಪಿ.ಐ ಬಸವರಾಜ್ ಇದ್ದರು.