ಶಿವಮೊಗ್ಗ:ಕಾಡು ಪ್ರಾಣಿಗಳ ಹಾವಳಿ ಹಿನ್ನೆಲೆಯಲ್ಲಿ ತೋಟ ಕಾಯಲು ಹೋದ ವ್ಯಕ್ತಿ ಆಕಸ್ಮಿಕವಾಗಿ ಜಾರಿ ಬಿದ್ದು, ತನ್ನ ಬಂದೂಕಿನಿಂದಲೇ ಸಿಡಿದ ಗುಂಡಿನಿಂದ ಪ್ರಾಣ ಕಳೆದುಕೊಂಡ ದಾರುಣ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ರಾವೆಯ ನೇಗಿಲೋಣಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ರಾವೆಯ ನೇಗಿಲೋಣಿಯ ನಿವಾಸಿ ಅಂಬರೀಷ (30) ಮೃತ ವ್ಯಕ್ತಿ. ಇವರು ಕಳೆದ ರಾತ್ರಿ ತಮ್ಮ ತೋಟಕ್ಕೆ ಕಾಡು ಪ್ರಾಣಿಗಳು ನುಗ್ಗುತ್ತವೆಂದು ನಾಡ ಬಂದೂಕು ತೆಗೆದುಕೊಂಡು ತನ್ನ ಸ್ನೇಹಿತ ಕೀರ್ತಿ ಹಾಗೂ ಅಭಿಷೇಕರೊಂದಿಗೆ ತೆರಳಿದ್ದರು. ತೋಟದಲ್ಲಿದ್ದ ಕಾಡುಕೋಣಗಳನ್ನು ಓಡಿಸಿ ಮೂವರೂ ವಾಪಸ್ ಹೊರಟಿದ್ದರು.