ಶಿವಮೊಗ್ಗ:ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸೊರಬ ತಾಲೂಕಿನ ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದ್ದಾರೆ.
ಸಾಧನೆಯೇ ಮಾತಾಗಬೇಕು, ಮಾತೇ ಸಾಧನೆ ಆಗಬಾರದು: ಬಿ.ವೈ.ರಾಘವೇಂದ್ರ - undefined
ಶಿವಮೊಗ್ಗ ಲೋಕಸಭಾ ಚುನಾವಣಾ ಕಣ ರಂಗೆರಿದ್ದು, ಎರಡು ಪಕ್ಷದ ಅಭ್ಯರ್ಥಿಗಳು ಬಿರುಸಿನ ಪ್ರಚಾರಕ್ಕೆ ಮುಂದಾಗಿದ್ದಾರೆ.
![ಸಾಧನೆಯೇ ಮಾತಾಗಬೇಕು, ಮಾತೇ ಸಾಧನೆ ಆಗಬಾರದು: ಬಿ.ವೈ.ರಾಘವೇಂದ್ರ](https://etvbharatimages.akamaized.net/etvbharat/images/768-512-2886597-1008-b1b05575-e960-40c7-bd33-870bb08adc14.jpg)
ಬಿ.ವೈ.ರಾಘವೇಂದ್ರ ಬಿಜೆಪಿ ಅಭ್ಯರ್ಥಿ
ಬಿ.ವೈ.ರಾಘವೇಂದ್ರ ಬಿಜೆಪಿ ಅಭ್ಯರ್ಥಿ
ಸೊರಬ ತಾಲೂಕಿನ ಕೋಟಿಪುರ ಗ್ರಾಮದಲ್ಲಿ ಮತದಾರನ್ನು ಉದ್ದೇಶಿಸಿ ಮಾತನಾಡಿದ ಬಿವೈಆರ್, ಈ ಭಾಗದ ನೀರಾವರಿ ಯೋಜನೆಗಳು ಬಿ.ಎಸ್.ಯಡಿಯೂರಪ್ಪನವರ ಹೋರಾಟಗಳ ಫಲವಾಗಿ ಅನುಷ್ಠಾನಕ್ಕೆ ಬಂದಿವೆಯೇ ಹೊರತು ಬೇರೆ ಯಾರಿಂದಲ್ಲ. ಆದ್ರೆ ಮೈತ್ರಿ ಪಕ್ಷದ ಅಭ್ಯರ್ಥಿ ಈ ಯೋಜನೆಗಳನ್ನ ನಾನೇ ಈ ಕ್ಷೇತ್ರಕ್ಕೆ ತಂದಿದ್ದು ಎಂದು ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ. ಇಂತಹ ಸುಳ್ಳು ಬಹಳ ದಿನ ನಡೆಯುವುದಿಲ್ಲ. ಹಾಗಾಗಿಯೇ ಈ ಭಾಗದ ಜನ ಅವರನ್ನ ಮನೆಗೆ ಕಳಿಸಿದ್ದಿರಿ ಎಂದು ಟಾಂಗ್ ನೀಡಿದ್ಧಾರೆ. ಅಲ್ಲದೆ ಸಾಧನೆಯೇ ಮಾತಾಗಬೇಕೆ ಹೊರತು ಮಾತೇ ಸಾಧನೆ ಆಗಬಾರದು ಎಂದಿದ್ದಾರೆ.