ಶಿವಮೊಗ್ಗ: ಗ್ರೀನ್ ಝೋನ್ ಆಗಿರುವ ಶಿವಮೊಗ್ಗಕ್ಕೆ, ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಹೆಚ್ಚುತ್ತಿರುವ ದಾವಣಗೆರೆ ಹಾಗೂ ಬೇರೆ ಜಿಲ್ಲೆಯಿಂದ ಬಂದ ತರಕಾರಿ ಗಾಡಿಗಳನ್ನು ಶಿವಮೊಗ್ಗ ತರಕಾರಿ ಮಾರುಕಟ್ಟೆ ಒಳಗೆ ಪ್ರವೇಶಿಸಲು ಬಿಡದೇ ವಾಪಸ್ ಕಳಿಸಲಾಗುತ್ತಿದೆ.
ದಾವಣಗೆರೆಯಿಂದ ಶಿವಮೊಗ್ಗಕ್ಕೆ ಬಂದ ತರಕಾರಿ ಗಾಡಿಗಳನ್ನು ತಡೆಹಿಡಿದ ವರ್ತಕರು - ತರಕಾರಿ ಮಾರುಕಟ್ಟೆ
ದಾವಣಗೆರೆ ಜಿಲ್ಲೆಯಿಂದ ಬಂದಿರುವ ತರಕಾರಿಗಳನ್ನು ನಮ್ಮ ತರಕಾರಿ ಮಾರುಕಟ್ಟೆ ಒಳಗೆ ಬಿಡುವುದಿಲ್ಲ ಎಂದು ಮಾರುಕಟ್ಟೆ ಗೇಟ್ಗೆ ಬೀಗ ಹಾಕಿ ತರಕಾರಿ ಗಾಡಿಗಳನ್ನು ವರ್ತಕರು ವಾಪಸ್ ಕಳಿಸುತ್ತಿದ್ದಾರೆ.
vehicle
ಇಲ್ಲಿನ ತರಕಾರಿ ವರ್ತಕರು ಈ ನಿರ್ಧಾರ ಕೈಗೊಂಡು ದಾವಣಗೆರೆ ಜಿಲ್ಲೆಯಿಂದ ಬಂದಿರುವ ತರಕಾರಿಗಳನ್ನು ನಮ್ಮ ತರಕಾರಿ ಮಾರುಕಟ್ಟೆ ಒಳಗೆ ಬಿಡುವುದಿಲ್ಲ ಎಂದು ಮಾರುಕಟ್ಟೆ ಗೇಟ್ಗೆ ಬೀಗ ಹಾಕಿ ತರಕಾರಿ ಗಾಡಿಗಳನ್ನು ವಾಪಸ್ ಕಳಿಸುತ್ತಿದ್ದಾರೆ.
ಬೇರೆ ರಾಜ್ಯದಿಂದ ಹಾಗೂ ಬೇರೆ ಜಿಲ್ಲೆಯಿಂದ ಬರುವ ಯಾವುದೇ ತರಕಾರಿ ಗಾಡಿಗಳನ್ನು ಒಳಗಡೆ ಬಿಡಬಾರದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಂತೆ ಶಿವಮೊಗ್ಗ ಬರುವ ಮುಂಚೆಯೇ ಶಿವಮೊಗ್ಗ ಜಿಲ್ಲೆಗೆ ಬರುವ ಮಾರ್ಗ ಮಧ್ಯೆಯ ಚೆಕ್ ಪೋಸ್ಟ್ಗಳಲ್ಲಿ ಇಂತಹ ಗಾಡಿಗಳನ್ನು ತಡೆದು ವಾಪಸ್ ಕಳಿಸಬೇಕು ಎಂದು ಒತ್ತಾಯಿಸಿದರು.