ಶಿವಮೊಗ್ಗ:ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ರಾಜ್ಯದಲ್ಲಿ ಹರಡುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ನಾಳೆಯಿಂದ 14 ದಿನ ಮತ್ತೆ ಕೊರೊನಾ ಕರ್ಫ್ಯೂ ವಿಧಿಸಿದ ಕಾರಣ ಶಿವಮೊಗ್ಗ ನಗರದ ಜನರು ತರಕಾರಿ ಹಾಗೂ ದಿನಸಿ ಖರೀದಿಗೆ ಮುಗಿಬಿದ್ದಿದ್ದಾರೆ.
14 ದಿನ ಕೋವಿಡ್ ಕರ್ಫ್ಯೂ: ತರಕಾರಿ, ದಿನಸಿ ಖರೀದಿಗೆ ಮುಗಿಬಿದ್ದ ಜನ - shimofga market news
ರಾಜ್ಯಾದ್ಯಂತ ನಾಳೆ ಸಂಜೆಯಿಂದ 14 ದಿನಗಳ ಕಾಲ ರಾಜ್ಯ ಸರ್ಕಾರ ಕೋವಿಡ್ ಕರ್ಫ್ಯೂ ವಿಧಿಸಿದ ಹಿನ್ನೆಲೆ ಇಂದೇ ಶಿವಮೊಗ್ಗದ ಜನರು ತರಕಾರಿ ಹಾಗೂ ಸಾಮಗ್ರಿಗಳನ್ನು ಕೊಂಡೊಯ್ಯಲು ಮಾರುಕಟ್ಟೆಗೆ ಅಪಾರ ಸಂಖ್ಯೆಯಲ್ಲಿ ಧಾವಿಸಿದ್ದಾರೆ.
market
ನಗರದ ವ್ಯಾಪಾರ ಕೇಂದ್ರ ವಾಗಿರುವ ಗಾಂಧಿ ಬಜಾರ್ನಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಆದರೆ, ತರಕಾರಿ ಮಾರುಕಟ್ಟೆ ಸೇರಿದಂತೆ ದಿನಸಿ ಅಂಗಡಿಗಳ ಮುಂದೆ ಜನರು ಯಾವುದೇ ಸಾಮಾಜಿಕ ಅಂತರ ಇಲ್ಲದೇ ಖರೀದಿಗೆ ಮುಂದಾಗಿದ್ದಾರೆ.
Last Updated : Apr 26, 2021, 5:44 PM IST