ಶಿವಮೊಗ್ಗ:ಅಬ್ಬಿ ಫಾಲ್ಸ್ನಲ್ಲಿ ಈಜಲು ತೆರಳಿದ್ದ ಬೆಂಗಳೂರು ಮೂಲದ ಯುವಕನೋರ್ವ ಅಪಾಯದಲ್ಲಿ ಸಿಲುಕಿದ್ದನ್ನ ಗಮನಿಸಿದ ಸ್ಥಳೀಯರು ಆತನನ್ನು ರಕ್ಷಣೆ ಮಾಡಿದ್ದಾರೆ.
ಅಬ್ಬಿ ಫಾಲ್ಸ್ನಲ್ಲಿ ಕೊಚ್ಚಿ ಹೋಗ್ತಿದ್ದ ಯುವಕ... ಹಗ್ಗ ಕಟ್ಟಿ ರಕ್ಷಣೆ! - ಶಿವಮೊಗ್ಗ
ಅಬ್ಬಿ ಫಾಲ್ಸ್ನಲ್ಲಿ ಈಜಲು ತೆರಳಿದ್ದ ಯುವಕನೋರ್ವ ಅಪಾಯದಲ್ಲಿ ಸಿಲುಕಿದ್ದನ್ನ ಗಮನಿಸಿದ ಸ್ಥಳೀಯರು ಆತನನ್ನು ರಕ್ಷಣೆ ಮಾಡಿದ್ದಾರೆ.
ಅಬ್ಬಿ ಫಾಲ್ಸ್ನಲ್ಲಿ ಪ್ರಾಣಾಪಾಯದಿಂದ ಪಾರಾದ ಯುವಕ
ಜಿಲ್ಲೆಯ ಹೊಸನಗರ ತಾಲೂಕಿನ ಯಡೂರು ಬಳಿಯ ಅಬ್ಬಿ ಜಲಪಾತಕ್ಕೆ ಬೆಂಗಳೂರಿನಿಂದ 12 ಜನ ಯುವಕರ ತಂಡ ಆಗಮಿಸಿತ್ತು. ಇವರೆಲ್ಲಾ ಫಾಲ್ಸ್ನ ನೀರಿನಲ್ಲಿ ಆಟ ಆಡಲು ತೆರಳಿದ್ದ ವೇಳೆ ಯುವಕನೋರ್ವ ಕಾಲು ಜಾರಿ ಬಿದ್ದಿದ್ದಾನೆ. ನೀರಿನ ರಭಸಕ್ಕೆ ಜಾರಿ ಹತ್ತು ಅಡಿ ಕೆಳಕ್ಕೆ ಹೋಗಿದ್ದಾನೆ.
ಈ ವೇಳೆ ಯುವಕನ ಜೊತೆಗಿದ್ದವರು ಜೋರಾಗಿ ಕೂಗಿಕೊಂಡಿದ್ದಾರೆ. ತಕ್ಷಣ ಸ್ಥಳೀಯರು ಫಾಲ್ಸ್ ಸಮೀಪದಲ್ಲಿಯೇ ಇದ್ದ ಅಂಗಡಿಯಿಂದ ಹಗ್ಗವನ್ನು ತಂದು, ಯುವಕನನ್ನು ಕಾಪಾಡಿದ್ದಾರೆ. ಸ್ಥಳೀಯ ಯುವಕರ ಸಾಹಸಕ್ಕೆ ಸ್ಥಳೀಯರು ಹಾಗೂ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.