ಶಿವಮೊಗ್ಗ:ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿ ಮಾಡಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಹಾಗಾಗಿ ಶಿವಮೊಗ್ಗ ನಗರದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದರು ಸಹ ಜನ ಮಾತ್ರ ಯಾವುದನ್ನು ಲೆಕ್ಕಿಸದೇ ಮಾಂಸ, ತರಕಾರಿ ಖರೀದಿಗೆ ಮುಗಿಬಿದ್ದಿದ್ದರು.
ಶಿವಮೊಗ್ಗದಲ್ಲಿ ಸಾಮಾಜಿಕ ಅಂತರ ಮರೆತು ಮಾಂಸ, ತರಕಾರಿ ಖರೀದಿಗೆ ಮುಗಿಬಿದ್ದ ಜನ
ಶಿವಮೊಗ್ಗದಲ್ಲಿ ಸಾಮಾಜಿಕ ಅಂತರ ಮರೆತು ಮಾಂಸ, ತರಕಾರಿ ಖರೀದಿಗೆ ಮುಗಿಬಿದ್ದರು. ಮತ್ತೊಂದೆಡೆ ಕೆಲವು ಅಂಗಡಿಗಳ ಮುಂದೆ ಮಾಂಸ ಖರೀದಿಗೆ ಜನರು ಕ್ಯೂ ನಿಂತು ಸಾಮಾಜಿಕ ಅಂತರ ಕಾಪಾಡಿ ಮಾಂಸ ಖರೀದಿಸಿದರು.
ಶಿವಮೊಗ್ಗದಲ್ಲಿ ಸಾಮಾಜಿಕ ಅಂತರ ಮರೆತು ಮಾಂಸ, ತರಕಾರಿ ಖರೀದಿಗೆ ಮುಗಿಬಿದ್ದ ಜನ
ನಗರದ ವಿನೋಬಾ ನಗರ ತರಕಾರಿ ಮಾರುಕಟ್ಟೆ, ಲಷ್ಕರ್ ಮೊಹಲ್ಲಾ ಮೀನು ಮಾರುಕಟ್ಟೆ ಹಾಗೂ ಜೈಲ್ ರೋಡ್ನಲ್ಲಿ ಜನರು ಯಾವುದೇ ಸಾಮಾಜಿಕ ಅಂತರವಿಲ್ಲದೆ ಮೀನು, ಮಾಂಸ, ತರಕಾರಿ ಖರೀದಿಗೆ ಮುಗಿಬಿದ್ದಿದ್ದರು.
ಮಾಂಸ ಖರೀದಿಗೆ ಕ್ಯೂ:ಮತ್ತೊಂದೆಡೆ ಕೆಲವು ಅಂಗಡಿಗಳ ಮುಂದೆ ಮಾಂಸ ಖರೀದಿಗೆ ಜನರು ಕ್ಯೂ ನಿಂತು ಸಾಮಾಜಿಕ ಅಂತರ ಕಾಪಾಡಿ ಮಾಂಸ ಖರೀದಿಸಿದರು. ಮಾಂಸದಂಗಡಿ ಮುಂದೆ ಪೋಲಿಸರನ್ನು ಸಹ ನಿಯೋಜನೆ ಮಾಡಲಾಗಿತ್ತು.