ಶಿವಮೊಗ್ಗ:ದಿಢೀರ್ ಶಬ್ದದಿಂದ ಭೂಮಿ ಸೀಳಾಗಿರುವ ಘಟನೆ ಸಾಗರದ ನೆಹರು ನಗರದಲ್ಲಿ ನಡೆದಿದೆ. ನಗರದ ಮೊದಲನೇ ಕ್ರಾಸ್ ನಲ್ಲಿ ಇಂದು ರಸ್ತೆಯಲ್ಲಿ ಜೋರಾದ ಶಬ್ದ ಬಂದಿದೆ. ಇದರಿಂದ ಭಯಭೀತರಾದ ನೆಹರು ನಗರದ ನಿವಾಸಿಗಳು ಹೊರಗೆ ಬಂದು ನೋಡಿದ್ರೆ, ಭೂಮಿ ಸೀಳಾಗಿರುವುದು ಕಂಡು ಬಂದಿದೆ. ಇದರಿಂದ ನೀರು ಜೋರಾಗಿ ಉಕ್ಕಿ ಹರಿದಿದೆ. ಭೂಮಿಯಿಂದ ಬಂದ ನೀರು ಮನೆಗಳಿಗೆಲ್ಲ ನುಗ್ಗಿದೆ. ಸ್ವಲ್ಪ ಸಮಯದ ನಂತರ ನೀರು ಹರಿದು ಬೇರೆ ಕಡೆ ಹೋಗಿದೆ.
ಶಿವಮೊಗ್ಗ: ದಿಢೀರ್ ಶಬ್ದದಿಂದ ಸೀಳು ಬಿಟ್ಟ ಭೂಮಿ.. ಭಯಭೀತರಾದ ಜನ - ಶಿವಮೊಗ್ಗದಲ್ಲಿ ದಿಢೀರ್ ಶಬ್ದಕ್ಕೆ ಬೆಚ್ಚಿದ ನಾಗರೀಕರು
ಶಿವಮೊಗ್ಗದ ನೆಹರು ನಗರದ ಮೊದಲನೇ ಕ್ರಾಸ್ನ ರಸ್ತೆಯಲ್ಲಿ ಜೋರಾದ ಶಬ್ದ ಬಂದಿದೆ. ಈ ಘಟನೆಯಿಂದ ಭಯಭೀತರಾದ ನಿವಾಸಿಗಳು ಸಾಗರ ನಗರಸಭೆಗೆ ಪೋನ್ ಮಾಡಿದರೂ ಸಹ ಯಾವುದೇ ಅಧಿಕಾರಿಗಳು ಇತ್ತ ಬಂದಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಸೀಳು ಬಿಟ್ಟ ಭೂಮಿ
ದಿಢೀರ್ ಶಬ್ದದಿಂದ ಸೀಳು ಬಿಟ್ಟ ಭೂಮಿ ಬಗ್ಗೆ ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿರುವುದು
ವಿಷಯ ತಿಳಿದ್ರು ಬಾರದ ಅಧಿಕಾರಿಗಳು:ನೆಹರು ನಗರದಲ್ಲಿ ಘಟನೆಯಿಂದ ಭಯಭೀತರಾದ ನಿವಾಸಿಗಳು ಸಾಗರ ನಗರಸಭೆಗೆ ಪೋನ್ ಮಾಡಿದರೂ ಸಹ ಯಾವುದೇ ಅಧಿಕಾರಿಗಳು ಇತ್ತ ಬಂದಿಲ್ಲ ಎಂಬ ಆರೋಪ ಕೇಳಿಬಂದಿದೆ. ನೀರು ಹೇಗೆ ಬಂತು, ಎಲ್ಲಿಂದ ಬಂತು, ಇದರಿಂದ ನಮ್ಮ ಮನೆಗಳಿಗೆ ಹಾನಿ ಏನಾದ್ರೂ ಆಗುತ್ತದೆಯೇ? ಎಂಬ ಅನುಮಾನ ಸ್ಥಳೀಯರಲ್ಲಿ ಕಾಡುತ್ತಿದೆ. ಇದಕ್ಕೆ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕಿದೆ.
ಓದಿ:ಯಾಕೆ ಈ ಮೀಟಿಂಗ್.. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ ಸರಣಿ ಸಭೆ..!