ಶಿವಮೊಗ್ಗ:ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನು ಅಗಲಿ ಆರು ತಿಂಗಳು ಕಳೆದಿದೆ. ಆದರೂ ತಮ್ಮ ನೆಚ್ಚಿನ ನಟನ ಮೇಲಿನ ಅಭಿಮಾನವನ್ನು ಇನ್ನೂ ಅಭಿಮಾನಿಗಳು ಕಳೆದುಕೊಂಡಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಸಾಗರ ತಾಲೂಕಿನ ಭೀಮನೇರಿ ಗ್ರಾಮಸ್ಥರು ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ನಟ ಪುನೀತ್ ರಾಜ್ಕುಮಾರ್ ಅವರ ಎರಡು ಅಡಿ ಎತ್ತರದ ಪುತ್ಥಳಿಯನ್ನು ಸ್ಥಾಪಿಸಿದ್ದಾರೆ. ಭೀಮನೇರಿ ಗ್ರಾಮದ ಮುಖ್ಯ ವೃತ್ತದಲ್ಲಿ ಅಪ್ಪು ಪುತ್ಥಳಿಯನ್ನು ಸ್ಥಾಪಿಸಲಾಗಿದೆ.
ಪುನೀತ್ ಇಹಲೋಕ ತ್ಯಜಿಸಿದ ನಂತರ ಅವರ ನೆನಪಿನಲ್ಲಿ ಏನಾದರೂ ಮಾಡಬೇಕೆಂದುಕೊಂಡಿದ್ದ ಗ್ರಾಮಸ್ಥರು ತಾವೇ ಯೋಚಿಸಿ, ಪುನೀತ್ ರಾಜ್ಕುಮಾರ್ ಪುತ್ಥಳಿಯನ್ನು ಸ್ಥಾಪಿಸಿ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದಾರೆ. ಇದಕ್ಕಾಗಿ ತಮ್ಮೂರಿನಲ್ಲಿಯೇ ಹಣವನ್ನು ಸಂಗ್ರಹಿಸಿದ್ದಾರೆ. ಗ್ರಾಮದ ಗುರು- ಹಿರಿಯರು ಸೇರಿಕೊಂಡು ಪುನೀತ್ ಅಗಲಿದ ಆರು ತಿಂಗಳಿಗೆ ಪುತ್ಥಳಿ ಸ್ಥಾಪಿಸಿದ್ದಾರೆ.