ಕರ್ನಾಟಕ

karnataka

ETV Bharat / state

ನಾವು ಕಾವಿ ಉಟ್ಟ ಸನ್ಯಾಸಿಗಳಾದರೆ, ಈಶ್ವರಪ್ಪ ಬಿಳಿ ಬಟ್ಟೆ ಉಟ್ಟ ಸನ್ಯಾಸಿ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ - ಅಮೃತ ಸಂಭ್ರಮ ಕಾರ್ಯಕ್ರಮ

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕೆ.ಎಸ್.ಈಶ್ವರಪ್ಪ ಅವರ 75ನೇ ವರ್ಷದ ಜನ್ಮದಿನದ ಅಂಗವಾಗಿ ಅಮೃತ ಸಂಭ್ರಮ ಕಾರ್ಯಕ್ರಮ ಆಚರಿಸಲಾಯಿತು.

ಅಮೃತ ಸಂಭ್ರಮ ಕಾರ್ಯಕ್ರಮ
ಅಮೃತ ಸಂಭ್ರಮ ಕಾರ್ಯಕ್ರಮ

By

Published : Jun 11, 2023, 9:47 AM IST

Updated : Jun 11, 2023, 10:50 AM IST

ಅಮೃತ ಸಂಭ್ರಮ ಕಾರ್ಯಕ್ರಮ

ಶಿವಮೊಗ್ಗ:ನಾವು ಕಾವಿ ಉಟ್ಟ ಸನ್ಯಾಸಿಗಳಾದರೆ, ಕೆ.ಎಸ್. ಈಶ್ವರಪ್ಪ ಬಿಳಿ ಬಟ್ಟೆ ಉಟ್ಟ ಸನ್ಯಾಸಿ ಎಂದು ನಾವು ಭಾವಿಸುತ್ತೇವೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಶನಿವಾರ ರಾತ್ರಿ ನಗರದ ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗ ನಾಗರಿಕ ಅಭಿನಂದನಾ ಸಮಿತಿ ಮತ್ತು ಶ್ರೀಗಂಧ ಸಂಸ್ಥೆಯ ಸಹಯೋಗದಲ್ಲಿ ಈಶ್ವರಪ್ಪನವರ 75ನೇ ವರ್ಷದ ಜನ್ಮದಿನ ಅಂಗವಾಗಿ ಅಮೃತ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿತ್ತು.

'ಈಶ್ವರಪ್ಪ ತಮ್ಮ ಬದುಕನ್ನು ಜಗತ್ತಿಗೆ ಸಮರ್ಪಿಸಿಕೊಂಡವರು':ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೇಜಾವರ ಶ್ರೀಗಳು, ನಾವು ಗುಡಿಯ ಒಳಗಿರುವ ಕೃಷ್ಣನನ್ನು ಆರಾಧಿಸಿದರೆ, ಗುಡಿಯ ಹೊರಗೆ, ಎಲ್ಲರ ಹೃದಯ ಗುಡಿಯೊಳಗೆ ನೆಲೆಸಿರುವ ಕೃಷ್ಣನ ಆರಾಧನೆ ಮಾಡಿರುವುದು ನಮ್ಮ ಈಶ್ವರಪ್ಪನವರು. ಶ್ರೀಗಂಧ ತೇಯುತ್ತಾ ತನ್ನ ಪರಿಮಳವನ್ನು ಜಗತ್ತಿಗೆ ನೀಡುತ್ತದೆ. ಅದೇ ರೀತಿ ಈಶ್ವರಪ್ಪ ತಮ್ಮ ಬದುಕನ್ನು ಜಗತ್ತಿಗೆ ಸಮರ್ಪಿಸಿಕೊಂಡಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ ಎಂದರು. ಈಶ್ವರಪ್ಪ ಎಂದಿಗೂ ತಮಗೋಸ್ಕರ ಬದುಕಿದವರಲ್ಲ, ಸಮಾಜಕ್ಕಾಗಿ ಬದುಕಿದವರು. ರಾಜಕಾರಣಿಗಳು ಸಮಾಜಕ್ಕಾಗಿ ತಮ್ಮನ್ನು ಯಾವ ರೀತಿ ಸಮರ್ಪಿಸಿಕೊಳ್ಳಬೇಕು ಎಂಬುದನ್ನು ತಮ್ಮ ಬದುಕಿನ ಮೂಲಕ ಪಾಠ ಮಾಡಿದ್ದಾರೆ. ಅವರ ಚಿಂತನೆಗಳು ಸಮಾಜಕ್ಕೆ ಆದರ್ಶ. ಅಂತಹ ಆದರ್ಶ ಬದುಕನ್ನು ಬದುಕಿದ ಈಶ್ವರಪ್ಪ ದಂಪತಿಗೆ ಶ್ರೀಕೃಷ್ಣ, ರಾಮನ ಅನುಗ್ರಹದ ಶ್ರೀರಕ್ಷೆ ಸಿಗಲಿ ಎಂದು ಪ್ರಾರ್ಥಿಸುತ್ತೇವೆ. ಅವರಿಂದ ಇನ್ನಷ್ಟು ಸಮಾಜ ಸೇವೆ ನಿರಂತವಾಗಿ ನಡೆಯುವಂತೆ ಭಗವಂತ ಅನುಗ್ರಹಿಸಲಿ ಎಂದು ಆಶೀರ್ವದಿಸಿದರು.

ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ: ಮುಂದುವರೆದು ಮಾತನಾಡಿದ ಅವರು, ಸಾವಿರಾರು ಜನರ ಪರಿಶ್ರಮದ ಫಲವಾಗಿ ಅಯೋಧ್ಯೆಯ ರಾಮಮಂದಿರದ ವೇದಿಕೆ ನಿರ್ಮಾಣವಾಗಿದೆ. ಕಂಬಗಳನ್ನು ನಿಲ್ಲಿಸಲಾಗಿದೆ. ಮೊದಲ ಮೇಲ್ಛಾವಣಿಯೂ ನಿರ್ಮಾಣವಾಗಿದೆ. ನೆಲಹಾಸಿನ ಕಾರ್ಯ ನಡೆಯುತ್ತಿದೆ. ಎರಡು ಮೂರು ತಿಂಗಳಲ್ಲಿ ಒಂದು ಹಂತದ ಕಾರ್ಯಗಳು ಮುಗಿಯುತ್ತವೆ. ಮಕರ ಸಂಕ್ರಾಂತಿಯ ವೇಳೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ನಡೆಯುತ್ತದೆ ಎಂದು ತಿಳಿಸಿದರು.

ಉಸಿರಿರುವವರೆಗೆ ದೇಶ, ಧರ್ಮ ರಕ್ಷಣೆಗೆ ಪ್ರಯತ್ನ: ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಪೂಜ್ಯ ಗುರುಗಳು ನಗರಕ್ಕೆ ಬಂದು ನನ್ನ 75ನೇ ವರ್ಷದ ಸಂದರ್ಭದಲ್ಲಿ ಮಾಡಿರುವ ಆಶೀರ್ವಾದ ಬರುವ ದಿನಗಳಲ್ಲಿ ಇನ್ನೂ ಹಿಂದೂ ಸಮಾಜದ ದೇಶದ ಸೇವೆ ಮಾಡಲು ನನಗೆ ಪ್ರೇರಣೆ ನೀಡಿದೆ. ಉಸಿರಿರುವವರೆಗೆ ದೇಶ, ಧರ್ಮದ ರಕ್ಷಣೆಗೆ ಪ್ರಯತ್ನಿಸುತ್ತೇನೆ. ಗುರುಗಳ ಆಶೀರ್ವಾದದಲ್ಲಿ ನಾವೆಲ್ಲ ಈ ಕಾರ್ಯದಲ್ಲಿ ಯಶಸ್ವಿಯಾಗೋಣ ಎಂದರು.

ಶಂಕರ್ ಶಾನುಭಾಗ್ ಮತ್ತು ತಂಡದವರು ದಾಸರ ಕೀರ್ತನೆಗಳನ್ನು ಹಾಡಿದರು. ಶಾಸಕ ಎಸ್.ಎನ್. ಚನ್ನಬಸಪ್ಪ, ಶಂಕರ ಶಾನಭಾಗ್ ಅವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ :ವಿಧಾನಸೌಧ ಪ್ರವೇಶಕ್ಕೂ ಮುನ್ನ ಗೋಮೂತ್ರ ಸಿಂಪಡಿಸಿದವರಿಂದ ಗೋ ಹತ್ಯೆ ಮಾತು: ಶಾಸಕ ಚನ್ನಬಸಪ್ಪ

Last Updated : Jun 11, 2023, 10:50 AM IST

ABOUT THE AUTHOR

...view details