ಕರ್ನಾಟಕ

karnataka

ETV Bharat / state

ಸೇಫ್ಟಿ ಗ್ಯಾಸ್ ಸೋರಿಕೆ: ಚಲಿಸುತ್ತಿದ್ದ ಬಸ್​ನಿಂದ ಹೊರ ಜಿಗಿದ ಮೂವರು ಪ್ರಯಾಣಿಕರು - ಚಲಿಸುತ್ತಿದ್ದ ಬಸ್​ನಿಂದ ಜಿಗಿದ ಪ್ರಯಾಣಿಕರು

ಸಾಗರದಿಂದ ಜೋಗ ಕಡೆ ತೆರಳುತ್ತಿದ್ದ ಖಾಸಗಿ ಬಸ್​ನಲ್ಲಿ ಲಗೇಜ್ ರೂಪದಲ್ಲಿದ್ದ ಸೇಫ್ಟಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿದೆ. ಸಿಲಿಂಡರ್​ನಿಂದ ಗ್ಯಾಸ್ ಹೊರಗೆ ಬರುತ್ತಿದ್ದಂತಯೇ ಗಾಬರಿಯಾದ ಶಿಲ್ಪಾ ಹಾಗೂ ಮೇಘನಾ ಸೇರಿ ಇನ್ನೂರ್ವ ಯುವಕ ಚಲಿಸುತ್ತಿದ್ದ ಬಸ್​ನಿಂದ ಹೊರ ಜಿಗಿದಿದ್ದಾರೆ.

accident
ಅಪಘಾತ

By

Published : Dec 13, 2020, 6:11 AM IST

ಶಿವಮೊಗ್ಗ: ಸೇಫ್ಟಿ ಗ್ಯಾಸ್​ ಸೋರಿಕೆಯಿಂದಾಗಿದೆ ಪ್ರಾಣ ಭಯದಿಂದ ಚಲಿಸುತ್ತಿದ್ದ ಬಸ್​ನಿಂದ ಮೂವರು ಪ್ರಯಾಣಿಕರು ಹೊರ ಜಿಗಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಸಾಗರದಿಂದ ಜೋಗ ಕಡೆ ತೆರಳುತ್ತಿದ್ದ ಖಾಸಗಿ ಬಸ್​ನಲ್ಲಿ ಲಗೇಜ್ ರೂಪದಲ್ಲಿದ್ದ ಸೇಫ್ಟಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿದೆ. ಸಿಲಿಂಡರ್​ನಿಂದ ಗ್ಯಾಸ್ ಹೊರಗೆ ಬರುತ್ತಿದ್ದಂತಯೇ ಗಾಬರಿಯಾದ ಶಿಲ್ಪಾ ಹಾಗೂ ಮೇಘನಾ ಸೇರಿ ಇನ್ನೂರ್ವ ಯುವಕ ಚಲಿಸುತ್ತಿದ್ದ ಬಸ್​ನಿಂದ ಹೊರ ಜಿಗಿದಿದ್ದಾರೆ.

ಶಿವಮೊಗ್ಗದಲ್ಲಿ ಸಂಭವಿಸಿದ ಅಪಘಾತ

ಇದರಿಂದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಸಿರಿವಂತೆ ಗ್ರಾಮದವರು ನೆರವಿಗೆ ಧಾವಿಸಿದ್ದಾರೆ. ಸಕಾಲದಲ್ಲಿ ಆ್ಯಂಬುಲೆನ್ಸ್ ಬಾರದೆ ಹೋದಾಗ ಸ್ಥಳೀಯ ಹೋಟೆಲ್ ಮಾಲೀಕ ಜಾವೀದ್ ಅವರು ತಮ್ಮ ವಾಹನದಲ್ಲೇ ಸಾಗರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭೀಮಾ ತೀರದ ಶೂಟೌಟ್ ಪ್ರಕರಣ: ಮತ್ತೊಬ್ಬನ ಬಂಧನ

ABOUT THE AUTHOR

...view details