ಕರ್ನಾಟಕ

karnataka

ETV Bharat / state

ರೈಲು ಹತ್ತುವಾಗ ಕೆಳಗೆ ಬಿದ್ದ ಪ್ರಯಾಣಿಕ: RPF ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ - ಶಿವಮೊಗ್ಗದ ನಿವಾಸಿ ದಿಲೀಪ್ ಕುಮಾರ್

ಶಿವಮೊಗ್ಗದ ನಿವಾಸಿ ದಿಲೀಪ್ ಕುಮಾರ್ ಎಂಬುವರು ತಮ್ಮ ಕುಟುಂಬದ ಜೊತೆ ಮೈಸೂರಿಗೆ ತೆರಳುತ್ತಿದ್ದರು. ಇವರು ಪ್ಲಾಟ್ ಫಾರಂನಲ್ಲಿದ್ದ ಅಂಗಡಿಗೆ ಹೋಗಿ ವಾಪಸ್ ರೈಲು ಹತ್ತುವಾಗ ಕಾಲು ಜಾರಿ ಬಿದ್ದಿದ್ದಾರೆ. ಅಲ್ಲೇ ಇದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ಅವರನ್ನು ಕಾಪಾಡಲಾಗಿದೆ.

Passenger falls down while boarding train
ರೈಲಿನಿಂದ ಪ್ಲಾಟ್ ಫಾರಂಗೆ ಬಿದ್ದ ವ್ಯಕ್ತಿ

By

Published : Dec 11, 2022, 4:39 PM IST

Updated : Dec 11, 2022, 6:17 PM IST

ರೈಲಿನಿಂದ ಪ್ಲಾಟ್ ಫಾರಂಗೆ ಬಿದ್ದ ವ್ಯಕ್ತಿ

ಶಿವಮೊಗ್ಗ:ರೈಲು ಹತ್ತುವಾಗ ಪ್ರಯಾಣಿಕರೊಬ್ಬರು ರೈಲಿನಿಂದ ಪ್ಲಾಟ್ ಫಾರಂಗೆ ಬಿದ್ದ ಘಟನೆ ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಈ ವೇಳೆ ಅಲ್ಲೇ ಇದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ಮಂಜುನಾಥ್ ಹಾಗೂ ಅಣ್ಣಪ್ಪ ಅವರು ಕೆಳಗೆ ಬಿದ್ದ ಪ್ರಯಾಣಿಕನನ್ನು ರಕ್ಷಿಸಿದ್ದಾರೆ. ಈ ಘಟನೆಯ ವಿಡಿಯೋವನ್ನು ಆರ್​ಪಿಎಫ್ ಮೈಸೂರು ವಿಭಾಗದವರು ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಘಟನೆ ವಿವರ:ಶನಿವಾರ ಬೆಳಗ್ಗೆ ಶಿವಮೊಗ್ಗದಿಂದ ತೆರಳುವ ತಾಳಗುಪ್ಪ - ಮೈಸೂರು ರೈಲಿನಲ್ಲಿ ಶಿವಮೊಗ್ಗದ ನಿವಾಸಿ ದಿಲೀಪ್ ಕುಮಾರ್ ಎಂಬುವರು ತಮ್ಮ ಕುಟುಂಬದ ಜೊತೆ ಮೈಸೂರಿಗೆ ತೆರಳುವಾಗ ಕುಟುಂಬದವರು ರೈಲಿನಲ್ಲಿದ್ದರು. ಇವರು ಪ್ಲಾಟ್ ಫಾರಂನಲ್ಲಿದ್ದ ಅಂಗಡಿಗೆ ಹೋಗಿ ವಾಪಸ್ ಆಗುವಾಗ ರೈಲು ಹೊರಟಿದೆ. ರೈಲು ಹೊರಟಿದೆ ಎಂದು ಗಾಬರಿಯಾಗಿ ರೈಲು ಹತ್ತುವಾಗ ಕಾಲು ಜಾರಿ ಬಿದ್ದಿದ್ದಾರೆ.

ಇದನ್ನೂ ಓದಿ:ಮುಂಬೈನಲ್ಲಿ ಸಂಚರಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದ ವ್ಯಕ್ತಿ : ವಿಡಿಯೋ ನೋಡಿ

ತಕ್ಷಣ ಅಲ್ಲಿಯೇ ಇದ್ದ ರೈಲ್ವೆ ಪೊಲೀಸ್ ಸಿಬ್ಬಂದಿಗಳಾದ ಮಂಜುನಾಥ್ ಹಾಗೂ ಅಣ್ಣಪ್ಪನವರು ದಿಲೀಪ್ ಕುಮಾರನ್ನು ಎತ್ತಿ ರಕ್ಷಿಸಿದ್ದಾರೆ. ಸ್ವಲ್ಪ ಉಪಚರಿಸಿದ ಮೇಲೆ ದಿಲೀಪ್ ರನ್ನು ಅದೇ ರೈಲ್​ನಲ್ಲಿ ಮೈಸೂರಿಗೆ ಕಳುಹಿಸಿ ಕೊಟ್ಟಿದ್ದಾರೆ.

Last Updated : Dec 11, 2022, 6:17 PM IST

ABOUT THE AUTHOR

...view details