ಶಿವಮೊಗ್ಗ: ಮಗಳ ಮದುವೆಗೆ ಬಂದ ಪೋಷಕರು ಬೀಗರ ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಆಗಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಶಿವರಾಜಪುರ ಗ್ರಾಮದ ಸಂತೋಷ್ ಹಾಗೂ ಐಶ್ವರ್ಯ ಪ್ರೀತಿಸಿ ಮದುವೆಯಾಗಿದ್ದಾರೆ. ಸಂತೋಷ್ ಹಾಸನದಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಈ ವೇಳೆ ಐಶ್ವರ್ಯ ಜೊತೆ ಲವ್ ಆಗಿದೆ. ಇಬರಿಬ್ಬರ ಪ್ರೀತಿಗೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದರು. ಅದರಂತೆ ಶಿವರಾಜಪುರ ಗ್ರಾಮದ ಸಾಲುಮರದ ಗಣಪತಿ ದೇವಾಲಯದಲ್ಲಿ ಮದುವೆ ನಿಗದಿಯೂ ಆಗಿತ್ತು.