ಕರ್ನಾಟಕ

karnataka

ETV Bharat / state

ಶಾಲಾ ವರ್ಗಾವಣೆ ಪತ್ರಕ್ಕಾಗಿ ಬಿಇಒ ಕಚೇರಿ ಮುಂದೆ ಪೋಷಕರ ಪ್ರತಿಭಟನೆ - ಈಟಿವಿ ಭಾರತ್​ ಕನ್ನಡ

ಶಾಲಾ ವರ್ಗಾವಣೆ ಪತ್ರ ನೀಡುತ್ತಿಲ್ಲ ಎಂದು ತೀರ್ಥಹಳ್ಳಿ ಕ್ಷೇತ್ರದ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.

kn_smg_02_tc_protest_avbb_7204213
ಬಿಇಓ ಕಚೇರಿ ಮುಂದೆ ಪೋಷಕರ ಪ್ರತಿಭಟನೆ

By

Published : Jul 30, 2022, 9:22 AM IST

ಶಿವಮೊಗ್ಗ: ತಮ್ಮ ಮಗನ ಶಾಲಾ ವರ್ಗಾವಣೆ ಪತ್ರ ನೀಡದ ಶಾಲೆಯ ವಿರುದ್ದ ಪೋಷಕರು ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.

ಪ್ರೀತಮ್​ ಎಂಬ ವಿದ್ಯಾರ್ಥಿ ಮಲೆನಾಡು ಎಂಬ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಕೋವಿಡ್​ನಿಂದಾಗಿ​ ವಿದ್ಯಾರ್ಥಿಯ ಶಾಲೆ ಶುಲ್ಕವನ್ನು ಕಟ್ಟಲಾಗದ ಪೋಷಕರು ಸರ್ಕಾರಿ ಶಾಲೆಗೆ ಸೇರಿಸಲು ತೀರ್ಮಾನ ಮಾಡಿದ್ದು, ವರ್ಗಾವಣೆ ಪತ್ರವನ್ನು ಕೇಳಿದ್ದಾರೆ. ಆದರೆ ಶಾಲಾ ಶುಲ್ಕವನ್ನು ಕಟ್ಟದ ಕಾರಣ ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿಯ ಮಲೆನಾಡು ಶಾಲೆ ವರ್ಗಾವಣೆ ಪತ್ರವನ್ನು ನೀಡಲು ನಿರಾಕರಿಸಿದೆ.

ಶಿಕ್ಷಣ ಇಲಾಖೆ ನಿಯಮದ ಪ್ರಕಾರ ವಿದ್ಯಾರ್ಥಿ ಒಂದು ಶಾಲೆ ಬಿಟ್ಟು ಇನ್ನೊಂದು ಶಾಲೆಗೆ ಸೇರಿದಾಗ ಶಾಲೆಯವರೇ ವರ್ಗಾವಣೆ ಪತ್ರವನ್ನು ಕಳುಹಿಸಬೇಕು. ಆದರೆ ಕುವೆಂಪು ಶಾಲೆಯವರು ಮಲೆನಾಡು ಶಾಲೆಗೆ ಪತ್ರ ಬರೆದಿದ್ರು ಸಹ ವರ್ಗಾವಣೆ ಪತ್ರ ಕಳುಹಿಸಿಲ್ಲ.

ಈ ಕುರಿತು ಪೋಷಕರು ತೀರ್ಥಹಳ್ಳಿ ಬಿಇಒ ಅವರಿಗೆ ಎರಡು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಈಗ ತಮ್ಮ ಮಗ ಶಾಲೆಗೆ ಹೋಗದೇ ಮನೆಯಲ್ಲಿ ಇರುವಂತಾಗಿದೆ. ಇದರಿಂದ ತಮ್ಮ ಮಗನಿಗೆ ವರ್ಗಾವಣೆ ಪತ್ರ ನೀಡಬೇಕೆಂದು ಆಗ್ರಹಿಸಿ ಪ್ರೀತಮ್ ಪೋಷಕರು ಗ್ರಾಮಸ್ಥರೊಂದಿಗೆ ಬಿಇಒ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ:ಸರಣಿ ಹತ್ಯೆ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು ಶಾಂತಿ ಸಭೆ ಆಯೋಜನೆ

ABOUT THE AUTHOR

...view details