ಶಿವಮೊಗ್ಗ:ಭದ್ರಾವತಿಯ ವಿಐಎಸ್ಎಲ್ನಲ್ಲಿ ಆಕ್ಸಿಜನ್ ಪ್ಲಾಂಟ್ ಇದೆ. ಇಲ್ಲಿ ಶೀಘ್ರವಾಗಿ ಆಕ್ಸಿಜನ್ ತಯಾರು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಇಂದು ಚೇಂಬರ್ ಆಫ್ ಕಾಮರ್ಸ್ನಲ್ಲಿ ನಡೆದ ಸೇವಾ ಭಾರತಿ ಹೆಲ್ಪ್ ಲೈನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಾನು ಮತ್ತು ಜಿಲ್ಲಾಧಿಕಾರಿ ಭದ್ರಾವತಿಗೆ ಭೇಟಿ ನೀಡಿದ್ದೆವು. ಇಲ್ಲಿನ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯಲ್ಲಿ ಒಂದು ಆಕ್ಸಿಜನ್ ಪ್ಲಾಂಟ್ ಇದೆ. ಇದು ಹಳೆಯ ಪ್ಲಾಂಟ್ ಆಗಿದ್ದು, ಈ ಪ್ಲಾಂಟ್ಗೆ ಸ್ವಲ್ಪ ಹಣ ಖರ್ಚು ಮಾಡಿದ್ರೆ ಇಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಬಹುದಾಗಿದೆ. ಇಲ್ಲಿ ಇನ್ನು ಮೂರು ನಾಲ್ಕು ದಿನದಲ್ಲಿ ಆಕ್ಸಿಜನ್ ಉತ್ಪಾದನೆ ಆಗುತ್ತದೆ ಎಂದರು.
ನಮ್ಮ ಜಿಲ್ಲೆಗೆ ಬೇಕಾದ ಆಕ್ಸಿಜನ್ ಇಲ್ಲಿಂದಲೇ ಉತ್ಪಾದನೆ ಮಾಡಬಹುದಾಗಿದೆ. ವಾರದ ಒಂದು ದಿನದ ಆಕ್ಸಿಜನ್ ನಮ್ಮ ಜಿಲ್ಲೆಗೆ ಸಾಕಾಗುತ್ತದೆ. ಉಳಿದ ದಿನದ ಆಕ್ಸಿಜನ್ ಬೇರೆಯವರಿಗೆ ನೀಡಬಹುದಾಗಿದೆ. ಇಂದು ನಡೆಯುವ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಈ ಕುರಿತು ಚರ್ಚೆ ನಡೆಸುತ್ತೇನೆ. ವಿಐಎಸ್ಎಲ್ನಲ್ಲಿ ಅದಷ್ಟು ಬೇಗ ಆಕ್ಸಿಜನ್ ಉತ್ಪಾದನೆ ಮಾಡಲು ಸೂಚನೆ ನೀಡಲಾಗುವುದು ಎಂದರು.