ಶಿವಮೊಗ್ಗ:ರಂಜಾನ್ ಹಬ್ಬದ ನಿಮಿತ್ತ ನಗರದ ಡಿಎಆರ್ ಮೈದಾನದಲ್ಲಿ ಪೊಲೀಸ್ ಇಲಾಖೆ ಇಂದು ರೌಡಿಗಳ ಪರೇಡ್ ನಡೆಸಿತು. ರಂಜಾನ್ ಹಬ್ಬ ಇರುವುದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಶ್ವಿನಿ ಅವರು ಉಪ ವಿಭಾಗದ ರೌಡಿಗಳನ್ನು ಕರೆಯಿಸಿ ಬಾಲ ಬಿಚ್ಚದಂತೆ ಎಚ್ಚರಿಕೆ ನೀಡಿದರು.
ನಗರದಲ್ಲಿ ರೌಡಿಗಳ ಪರೇಡ್... ವರ್ತನೆ ತಿದ್ದಿಕೊಳ್ಳದಿದ್ದರೆ ಹುಷಾರ್... ಎಸ್ಪಿ ಖಡಕ್ ವಾರ್ನಿಂಗ್!
ನಗರದ ಡಿಎಆರ್ ಮೈದಾನದಲ್ಲಿ ಪೊಲೀಸ್ ಇಲಾಖೆ ರೌಡಿಗಳ ಪರೇಡ್ ನಡೆಸಿತು. ಈ ವೇಳೆ ರೌಡಿಗಳು ಬಾಲ ಬಿಚ್ಚದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಶ್ವಿನಿ ಎಚ್ಚರಿಕೆ ನೀಡಿದರು.
ರಂಜಾನ್ ಹಬ್ಬದ ಪ್ರಯುಕ್ತ ರೌಡಿಗಳ ಪರೇಡ್
ಸುಮಾರು 1002 ರೌಡಿ ಶೀಟರ್ಗಳಿದ್ದ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಕೇವಲ 300 ರೌಡಿಗಳು ಮಾತ್ರ ಪರೇಡ್ನಲ್ಲಿ ಹಾಜರಾಗಿದ್ದರು. ಹಿಂದಿನಂತೆ ನಾನು ರೌಡಿ, ನನ್ನ ಮಾತು ನಡೆಯಬೇಕು. ಎದುರಾಳಿ ಗ್ಯಾಂಗ್ ಹೊಡೆಯಬೇಕು ಎಂಬ ಯೋಚನೆಗಳಿದ್ದರೆ ಬಿಡಬೇಕು. ಇದೇ ರೀತಿ ವರ್ತಿಸಿದರೆ ಪರಿಣಾಮ ನೆಟ್ಟಗಿರಲ್ಲ ಅಂತ ವರಿಷ್ಠಾಧಿಕಾರಿ ಎಚ್ಚರಿಕೆ ನೀಡಿದರು. ಮುಖ್ಯವಾಗಿ ಗಾಂಜಾ ಪ್ರಕರಣದಲ್ಲಿದ್ದವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು.