ಶಿವಮೊಗ್ಗ:ಜಿಲ್ಲೆಯಲ್ಲಿ ಕಳೆದ ಏಳು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಲವಾರು ಅನಾಹುತಗಳು ಉಂಟಾಗಿವೆ. ಈ ಬಗ್ಗೆ ನಮ್ಮ ಸಮಸ್ಯೆ ಕೇಳಲು ಕೇವಲ ಪಾಲಿಕೆ ಸದಸ್ಯರು ಮಾತ್ರ ಭೇಟಿ ನೀಡುತ್ತಿದ್ದಾರೆ. ಆದರೆ ಶಾಸಕ ಈಶ್ವರಪ್ಪ ಅವರು ಮಾತ್ರ ಸಮಸ್ಯೆ ಕೇಳಲು ಬರುತ್ತಿಲ್ಲ ಎಂದು ನಗರದ ರಾಜೀವ್ ಗಾಂಧಿ ಬಡಾವಣೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೋಟ್ ಕೇಳೋಕೆ ಮಾತ್ರ ಬರ್ತಾರೆ, ನಮಗೆ ಸಮಸ್ಯೆ ಆದಾಗ ಯಾರೂ ಬರಲ್ಲ: ಸ್ಥಳೀಯರ ಆಕ್ರೋಶ
ಜಿಲ್ಲೆಯಲ್ಲಿ ಕಳೆದ ಏಳು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಲವಾರು ಅನಾಹುತಗಳು ಉಂಟಾಗಿವೆ. ಈ ಬಗ್ಗೆ ನಮ್ಮ ಸಮಸ್ಯೆ ಕೇಳಲು ಕೇವಲ ಪಾಲಿಕೆ ಸದಸ್ಯರು ಮಾತ್ರ ಭೇಟಿ ನೀಡುತ್ತಿದ್ದಾರೆ. ಆದರೆ ಶಾಸಕ ಈಶ್ವರಪ್ಪ ಅವರು ಮಾತ್ರ ಸಮಸ್ಯೆ ಕೇಳಲು ಬರುತ್ತಿಲ್ಲ ಎಂದು ನಗರದ ರಾಜೀವ್ ಗಾಂಧಿ ಬಡಾವಣೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಏಳು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಶಿವಮೊಗ್ಗ ಜಿಲ್ಲೆ ತತ್ತರಿಸಿ ಹೋಗಿದೆ. ಇಂದು ಮಳೆ ಸ್ವಲ್ಪ ಕಡಿಮೆಯಾಗಿದ್ದು, ಮನೆಗಳಿಗೆ ನುಗ್ಗಿದ್ದ ನೀರು ಕಂಚ ತಗ್ಗಿದೆ. ಇಂದು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಹಾಗೂ ಪಾಲಿಕೆ ಸದಸ್ಯರು ರಾಜೀವ್ ಗಾಂಧಿ ಬಡಾವಣೆಗೆ ಹೋಗಿ ಜನರ ಸಮಸ್ಯೆಗಳನ್ನ ಆಲಿಸಿದರು. ಈ ವೇಳೆ ರಾಜೀವ್ಗಾಂಧಿ ಬಡಾವಣೆ ಜನರು ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ ತಮ್ಮ ಸಮಸ್ಯೆ ಕೇಳಲು ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಬಂದಾಗ ಮಾತ್ರ ಸಂಜೆ, ಬೆಳಗ್ಗೆ ನಮ್ಮ ಮನೆಗೆ ಬಂದು ಮತ ಕೇಳ್ತಾರೆ. ಆದರೆ ನಮಗೆ ಸಮಸ್ಯೆ ಬಂದಾಗ ಮಾತ್ರ ಯಾರು ಬರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.