ಶಿವಮೊಗ್ಗ: ಸರ್ಕಾರಿ ಶಾಲೆಯ ಜಾಗದಲ್ಲಿ ಖಾಸಗಿ ಸಮುದಾಯ ನಿರ್ಮಿಸಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಶಿವಮೊಗ್ಗ ಪೀಸ್ ಆರ್ಗನೈಸೇಷನ್ ವತಿಯಿಂದ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಲಾಯಿತು.
ನ್ಯೂ ಮಂಡ್ಲಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಜಾಗವನ್ನು ಅತಿಕ್ರಮಿಸಲಾಗುತ್ತಿದೆ. ಇಲ್ಲಿ ಖಾಸಗಿ ಸಮುದಾಯ ಭವನ ನಿರ್ಮಿಸಲು ಹೊರಟಿದ್ದು, ಮಹಾನಗರ ಪಾಲಿಕೆ ವತಿಯಿಂದ ಕಾಂಪೌಂಡ್ ಕಾಮಗಾರಿ ನಡೆಯುತ್ತಿದೆ. ಕೆಲವರು ಶಾಲೆಯ ಪಕ್ಕದಲ್ಲಿಯೇ ಖಾಸಗಿ ಸಮುದಾಯ ಭವನ ನಿರ್ಮಿಸಲು ಹೊರಟಿದ್ದಾರೆ. ಶಾಲೆಯ ಖಾಲಿ ಜಾಗವನ್ನು ಅತಿಕ್ರಮಿಸುವುದು ಸರಿಯಲ್ಲ ಎಂದು ಆರೋಪಿಸಿದರು.