ಕರ್ನಾಟಕ

karnataka

ETV Bharat / state

ಗಣೇಶ ಚತುರ್ಥಿ ಆಚರಣೆ ಮಾರ್ಗಸೂಚಿಗೆ ಶಿವಮೊಗ್ಗದಲ್ಲಿ ತೀವ್ರ ವಿರೋಧ - ಗಣೇಶ ಚತುರ್ಥಿ ಆಚರಣೆ ಮಾರ್ಗಸೂಚಿಗೆ ಶಿವಮೊಗ್ಗದಲ್ಲಿ ವಿರೋಧ

ಗಣೇಶ ಚತುರ್ಥಿ ಆಚರಣೆಗೆ ರಾಜ್ಯ ಸರ್ಕಾರವು ಸೂಚಿಸಿರುವ ಮಾರ್ಗಸೂಚಿಗೆ ಶಿವಮೊಗ್ಗದಲ್ಲಿ ಹಿಂದೂಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

oppose-for-ganesh-festival-guidelines-in-shivamogga
ಗಣೇಶ ಚತುರ್ಥಿ ಆಚರಣೆ ಮಾರ್ಗಸೂಚಿಗೆ ಶಿವಮೊಗ್ಗದಲ್ಲಿ ತೀವ್ರ ವಿರೋಧ

By

Published : Sep 8, 2021, 8:17 AM IST

Updated : Sep 8, 2021, 10:49 AM IST

ಶಿವಮೊಗ್ಗ:ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯ ಆತಂಕ ಹಿನ್ನೆಲೆಯಲ್ಲಿ ಸರ್ಕಾರವು ಗಣಪತಿ ಹಬ್ಬ ಆಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ತಜ್ಞರ ಸಲಹೆ ಸೂಚನೆ ಮೇರೆಗೆ ಕೆಲ ನಿರ್ಬಂಧ ವಿಧಿಸಲಾಗಿದೆ. ಆದರೆ, ಶಿವಮೊಗ್ಗದಲ್ಲಿ ಸರ್ಕಾರದ ಮಾರ್ಗಸೂಚಿಗೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

ಮನೆ, ದೇವಸ್ಥಾನ, ಸರ್ಕಾರಿ ಹಾಗೂ ಖಾಸಗಿ ಸಾರ್ವಜನಿಕ ಬಯಲು ಪ್ರದೇಶದಲ್ಲಿ ಗಣೇಶ ಪ್ರತಿಷ್ಠಾಪಿಸಿ, ಕನಿಷ್ಠ ಸಂಖ್ಯೆಯ ಜನರೊಂದಿಗೆ ಹಬ್ಬ ಅಚರಿಸಲು ಸರ್ಕಾರ ಸೂಚಿಸಿದೆ. ಇದರ ಜೊತೆಗೆ ನಗರ ಭಾಗದಲ್ಲಿ ವಾರ್ಡ್​ಗೆ ಒಂದು ಗಣೇಶನ ಪ್ರತಿಷ್ಠಾಪನೆಗೆ ಸರ್ಕಾರ ಆದೇಶಿಸಿದ್ದು, ಹಿಂದೂಪರ ಸಂಘಟನೆಗಳು, ಗಣೇಶೋತ್ಸವ ಸಮಿತಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಗಣೇಶ ಚತುರ್ಥಿ ಆಚರಣೆ ಮಾರ್ಗಸೂಚಿಗೆ ಶಿವಮೊಗ್ಗದಲ್ಲಿ ವಿರೋಧ

ಚುನಾವಣೆ, ಜನಾಶೀರ್ವಾದ ಯಾತ್ರೆಗೆ ಇಲ್ಲದ ನಿಯಮ ಗಣೇಶೋತ್ಸವಕ್ಕೆ ಮಾತ್ರ ಏಕೆ? ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಮಾಡುತ್ತಿರುವುದೇನು? ವಾರ್ಡ್​​ಗೆ ಒಂದು ಗಣೇಶ ಅಲ್ಲ, ಗಲ್ಲಿಗಲ್ಲಿಯಲ್ಲಿ ಗಣೇಶ ಕೂರಿಸುತ್ತೇವೆ. ಗಣೇಶೋತ್ಸವಕ್ಕೆ ಸರ್ಕಾರ ಸಹಕಾರ ನೀಡಬೇಕು.

ಯಾವುದೇ ಹಿಂದೂ ಪರ ಸಂಘಟನೆ ಮತ್ತು ಗಣೇಶೋತ್ಸವ ಸಮಿತಿಗಳು ಕೋವಿಡ್ ನಿಯಮ ಉಲ್ಲಂಘಿಸಲ್ಲ. ನಿಯಮಾವಳಿ ಪಾಲಿಸಿಕೊಂಡು ಆಚರಣೆ ಮಾಡ್ತೇವೆ‌. ವಾರ್ಡ್​ಗೆ ಒಂದು ಗಣೇಶ ಎಂಬ ನಿಯಮ ಪಾಲನೆ ಸಾಧ್ಯವೇ ಇಲ್ಲ. ನಿರ್ಬಂಧ ಬದಲಿಸಿ, ಹಬ್ಬದ ಆಚರಣೆಗೆ ಅವಕಾಶ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ‌ ದೀನದಯಾಳು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಕೊಡಗಿನಲ್ಲಿ 'ನಿಫಾ' ಭೀತಿ: ಹೈ ಆಲರ್ಟ್ ಘೋಷಿಸಿದ ಜಿಲ್ಲಾಡಳಿತ

Last Updated : Sep 8, 2021, 10:49 AM IST

ABOUT THE AUTHOR

...view details