ಶಿವಮೊಗ್ಗ:ರಾಜ್ಯದಲ್ಲಿ ಬಿಜೆಪಿಯವರು ನಡೆಸಲು ಹೊರಟಿರುವ ಆರಪೇಷನ್ ಕಮಲ ಯಶಸ್ವಿಯಾಗುವುದಿಲ್ಲ, ಸಂಪೂರ್ಣ ವಿಫಲವಾಗಲಿದೆ ಎಂದು ಶಿವಮೊಗ್ಗ ಉಸ್ತುವಾರಿ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿಗರು ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಯತ್ನ ಮಾಡಬೇಡಿ. ಈಗಾಗಲೇ ಬಿಜೆಪಿಯವರು ಆಪರೇಷನ್ ಕಮಲ ನಡೆಸುತ್ತಿರುವ ಕುರಿತು ಬಹಿರಂಗವಾಗಿದೆ. ಹಾಗಿರುವಾಗ ಖಂಡಿತವಾಗಿಯೂ ಅವರ ಆಪರೇಷನ್ ಕಮಲ ವಿಫಲವಾಗಲಿದೆ. ಈ ರೀತಿ ಶಾಸಕರನ್ನು ಸೆಳೆಯುವ ಯತ್ನ ಮಾಡುವುದು ಪ್ರಜಾಪ್ರಭುತ್ವಕ್ಕೆ ವಿರೋಧ. ಬಿಜೆಪಿಯವರು ಪ್ರಜಾಪ್ರಭುತ್ವದ ವಿರೋಧಿ ನಡೆ ಅನುಸರಿಸುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ಇದೆಲ್ಲ ನಡೆಯಲ್ಲ ಎಂದು ಹೇಳಿದರು.
ಕಾಂಗ್ರೆಸ್ ಶಾಸಕ ರವಿ ಗಾಣಿಗ ಅವರು ಶಾಸಕರನ್ನು ಓಲೈಕೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕವಾಗಿ ಹೇಳಿದ್ದಾರೆ ಎಂದರೆ, ಸ್ಥಿರತೆ ಕಾಪಾಡುವ ಉದ್ದೇಶದಿಂದ ಹೇಳಿದ್ದಾರೆ. ಅವರೇ ಅದನ್ನು ಹೊಂದಿಸಿಕೊಂಡು ಹೋಗುವವರಿದ್ದರೆ ಬಹಿರಂಗವಾಗಿ ಹೇಳುತ್ತಿರಲಿಲ್ಲ. ನಮ್ಮ ಸರ್ಕಾರ ಸ್ಥಿರತೆಯಿಂದ ಕೂಡಿದೆ ಎಂದರು.
ರವಿ ಗಾಣಿಗ ಅವರ ಹೇಳಿಕೆ ವೈಯಕ್ತಿಕ:ರವಿ ಗಾಣಿಗ ಅವರು ಮುಖ್ಯಮಂತ್ರಿ ಬದಲಾವಣೆ ಮಾಡುವ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ ಅವರು ರವಿ ಅವರ ಹೇಳಿಕೆ ವೈಯಕ್ತಿಕವಾದದ್ದು, ಅವರ ಭಾವನೆ ವ್ಯಕ್ತಪಡಿಸಿದ್ದಾರೆ. ಇಂತಹ ವಿಚಾರಗಳೆಲ್ಲಾ ಸಾರ್ವಜನಿಕವಾಗಿ ಚರ್ಚೆ ಮಾಡುವಂತದ್ದು ಅಲ್ಲ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ಅಂತ ಇದೆ, ಇದನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ತಿಳಿಸಿದರು.
ಶಾಲೆಗಳಲ್ಲಿ ನೂರಕ್ಕೆ ನೂರರಷ್ಟು ಎಸ್ಡಿಎಂಸಿ ಇರಬೇಕು. ಎಸ್ಡಿಎಂಸಿಯನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಕಂಡು ಬಂದರೆ ನಮ್ಮ ಇಲಾಖೆಯಿಂದ ಕಠಿಣ ಕ್ರಮ ತೆಗೆದುಕೊಳ್ಳುವುದಕ್ಕೂ ಹಿಂಜರಿಯುವುದಿಲ್ಲ. 50- 60 ಶಾಲೆಗಳ ಪೈಕಿ ಒಂದೆರಡು ಶಾಲೆಗಳಲ್ಲಿ ಇರುವ ಸಮಸ್ಯೆಯನ್ನು ನಮ್ಮ ಇಲಾಖೆ ಪರಿಹರಿಸುತ್ತದೆ. ನವೆಂಬರ್ 8 ರಂದು ನಗರದ ಸೈನ್ಸ್ ಮೈದಾನದಲ್ಲಿ ಉದ್ಯೋಗ ಮೇಳ ನಡೆಸಲಾಗುತ್ತಿದೆ. ಇದರಿಂದ ನಿರುದ್ಯೋಗಿಗಳಿಗೆ ತುಂಬ ಅನುಕೂಲವಾಗಲಿದೆ. ಅಂದು 30-40 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಲಿವೆ ಎಂದು ಸಚಿವರು ಮಾಹಿತಿ ನೀಡಿದರು.
ಇಸ್ರೇಲ್ನಲ್ಲಿರುವ ಶಿವಮೊಗ್ಗದ ಸ್ವಾಮಿಗೆ ಧೈರ್ಯ ತುಂಬಿದ ಸಚಿವರು: ಇದೇ ವೇಳೆ ಇಸ್ರೇಲ್ನಲ್ಲಿ ಇರುವ ಶಿವಮೊಗ್ಗದ ಸ್ವಾಮಿ ಎಂಬವರ ಜೊತೆ ಫೋನ್ನಲ್ಲಿ ವಿಡಿಯೋ ಕಾಲ್ನಲ್ಲಿ ಮಾತನಾಡಿದ, ಸಚಿವರು ಫೋನ್ನಲ್ಲಿ ಮಾತನಾಡಿದರು. ಆದಷ್ಟು ಸುರಕ್ಷಿತವಾದ ಜಾಗದಲ್ಲಿ ಇರಿ. ಭಾರತಕ್ಕೆ ಯಾವಾಗ ಬರಬೇಕು ಎಂದು ತಿಳಿಸಿ, ವ್ಯವಸ್ಥೆ ಮಾಡೋಣ. ನಮ್ಮ ಸರ್ಕಾರದಿಂದ ಯಾವ ಸಹಾಯ ಬೇಕು ಎಂದು ತಿಳಿಸಿ ನಾವು ಮಾಡುತ್ತೇವೆ. ನೀವು ಮತ್ತು ನಿಮ್ಮ ಸ್ನೇಹಿತರು ಸುರಕ್ಷಿತವಾಗಿರಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ :ಬಿಜೆಪಿಯವರು 2500 ಎಂಎಲ್ಎಗಳನ್ನು ಖರೀದಿ ಮಾಡಿದ್ದಾರೆ : ಸಚಿವ ಸಂತೋಷ್ ಲಾಡ್