ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಹಳೇ ದ್ವೇಷದ ಹಿನ್ನೆಲೆ ಐವರ ಮೇಲೆ ಹಲ್ಲೆ - doddapete Police Station

ಹಳೇ ವೈಷ್ಯಮ್ಯದ ಹಿನ್ನೆಲೆ ಐವರ ಮೇಲೆ ನಾಲ್ವರು ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗದ ಗೋಪಾಳ ಗೌಡ ಬಡಾವಣೆಯಲ್ಲಿ ನಡೆದಿದೆ.

dfsad
ಹಳೇ ದ್ವೇಷದ ಹಿನ್ನೆಲೆ ಐವರ ಮೇಲೆ ಹಲ್ಲೆ

By

Published : Dec 3, 2020, 2:03 PM IST

ಶಿವಮೊಗ್ಗ: ಹಳೇ ವೈಷ್ಯಮ್ಯದ ಹಿನ್ನೆಲೆ ಐವರ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಗೋಪಾಳ ಗೌಡ ಬಡಾವಣೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಅನುಪಿನಕಟ್ಟೆ ಬಡಾವಣೆಯ ನಿವಾಸಿಗಳಾದ ಸುಧೀಂದ್ರನಾಯ್ಕ, ಮಂಜಾನಾಯ್ಕ ಹಾಗೂ ನವೀನ ಸೇರಿದಂತೆ ಇನ್ನಿಬ್ಬರು ಗೋಪಾಳ ಬಸ್ ನಿಲ್ದಾಣದ ಬಳಿ ಮಾತನಾಡುವಾಗ ಏಕಾಏಕಿ ಬಂದ ನಾಲ್ವರು ಹಲ್ಲೆ ಬೆನ್ನಿಗೆ ಚಾಕು ಇರಿದು ಪರಾರಿಯಾಗಿದ್ದಾರೆ.

ಸದ್ಯ ಗಾಯಾಳುಗಳು ಮೆಗ್ಗಾನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details