ಶಿವಮೊಗ್ಗ: ಕರ್ಮಷಿಯಲ್ ಟ್ಯಾಕ್ಸ್ ಅಧಿಕಾರಿಗಳ ಟಾಟಾ ಸುಮೋ ಹಾಗೂ ಓಮ್ನಿ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಓಮ್ನಿ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಘಟನೆ ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದ ಬಳಿ ನಡೆದಿದೆ.
ಶಿವಮೊಗ್ಗ ಕರ್ಮಷಿಯಲ್ ಟ್ಯಾಕ್ಸ್ ಅಧಿಕಾರಿಗಳು ತರೀಕೆರೆ ಕಡೆಯಿಂದ ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ್ದರು. ಈ ಮಾರ್ಗವಾಗಿ ಭದ್ರಾವತಿ ತೆರಳುತ್ತಿದ್ದ ಓಮ್ನಿ ಕಾರು ಡಿಕ್ಕಿಯಾಗಿದೆ. ಟಾಟಾ ಸುಮೋದಲ್ಲಿ ಅಧಿಕಾರಿಗಳಾದ ನಾಗಲಕ್ಷ್ಮೀ, ತೆರಿಗೆ ಇನ್ಸ್ಪೆಕ್ಟರ್ ಮಹೇಶ್ ಹಾಗೂ ಚಾಲಕ ಸುಬ್ರಮಣ್ಯ ಪ್ರಯಾಣಿಸುತ್ತಿದ್ದರು.