ಶಿವಮೊಗ್ಗ: ಕಳೆದ 24 ಗಂಟೆಗಳಲ್ಲಿ ಸುರಿದ ಅಶ್ಲೇಷ ಮಳೆ ಜಿಲ್ಲೆಯಲ್ಲಿ ಸಾಕಷ್ಟು ಅನಾಹುತ ಸೃಷ್ಟಿಸಿದ್ದು, ಮಳೆಗೆ ನೂರಾರು ಮನೆಗಳು ನೆಲಸಮವಾಗಿವೆ.
ಜಿಲ್ಲೆಯಲ್ಲಿ ನಿನ್ನೆ ಸಂಜೆ ಮಣ್ಣು ಕುಸಿದ ಪರಿಣಾಮ ತೀರ್ಥಹಳ್ಳಿ ತಾಲೂಕು ಕಳವತ್ತಿ ಗ್ರಾಮದ ರಮೇಶ್ ಎಂಬ ರೈತ ಸಾವನ್ನಪ್ಪಿದ್ದಾನೆ.
ಮಳೆಯಿಂದ ಕುಸಿದ ಮನೆಗಳ ವಿವರ:
ಶಿವಮೊಗ್ಗ ತಾಲೂಕಿನ 19, ಭದ್ರಾವತಿ 27, ಸಾಗರದಲ್ಲಿ 15, ತೀರ್ಥಹಳ್ಳಿಯಲ್ಲಿ 8, ಶಿಕಾರಿಪುರದಲ್ಲಿ 21, ಸೊರಬದಲ್ಲಿ 10 ಹಾಗೂ ಹೊಸನಗರದಲ್ಲಿ 6 ಮನೆ ಸೇರಿ ಒಟ್ಟು 106 ಮನೆಗಳು ಕುಸಿದಿವೆ. ತೀರ್ಥಹಳ್ಳಿ ತಾಲೂಕಿನ 5 ಸೇತುವೆಗಳು ಭಾಗಶಃ ಹಾನಿಯಾಗಿವೆ.
ಕೃಷಿ ಭೂಮಿ ಜಲಾವೃತಗೊಂಡ ವಿವರ:
ಸಾಗರದಲ್ಲಿ 2,150 ಹೆಕ್ಟೇರ್, ಸೊರಬ 2,239 ಹೆಕ್ಟೇರ್, ಶಿಕಾರಿಪುರದಲ್ಲಿ 6.5 ಹೆಕ್ಟೇರ್, ಹೊಸನಗರದ 58 ಹೆಕ್ಟೇರ್ ಕೃಷಿ ಭೂಮಿ ನೀರಿನಿಂದ ಜಲಾವೃತಗೊಂಡಿದೆ.
ಕಳೆದ 24 ಗಂಟೆಯಲ್ಲಿ ಸುರಿದ ಮಳೆ ವಿವರ:
ಶಿವಮೊಗ್ಗ-68 ಎಂ.ಎಂ.
ಭದ್ರಾವತಿ-76.20 ಎಂ.ಎಂ, ತೀರ್ಥಹಳ್ಳಿ-148.60 ಎಂ.ಎಂ.
ಸಾಗರ-157.40 ಎಂ.ಎಂ.
ಶಿಕಾರಿಪುರ-93.40 ಎಂ.ಎಂ.
ಸೊರಬ-152 ಎಂ.ಎಂ.
ಹೊಸನಗರ-283.20 ಎಂ.ಎಂ.
ಒಟ್ಟು- 139.83 ಎಂ.ಎಂ. ಮಳೆಯಾಗಿದೆ.
ಜಿಲ್ಲೆಯಲ್ಲಿ ಮಳೆ ಮುಂದುವರೆಯುವ ಸಾಧ್ಯತೆಗಳಿರುವುದರಿಂದ ಎಲ್ಲಾ ತಹಶೀಲ್ದಾರ್ಗಳಿಗೆ ಕೇಂದ್ರ ಸ್ಥಾನದಲ್ಲಿ ಇರುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳು ತೀರ್ಥಹಳ್ಳಿ ಹಾಗೂ ಶಿವಮೊಗ್ಗದಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.