ಶಿವಮೊಗ್ಗ: ದೇಶಾದ್ಯಂತ 45 ವರ್ಷ ಮೇಲ್ಪಟ್ಟ ಜನರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ನಗರದ ಜಿಲ್ಲಾ ಪ್ರಾಥಮಿಕ ಆರೋಗ್ಯ ತರಬೇತಿ ಕೇಂದ್ರದ ಮುಂದೆ ವೃದ್ಧರು ಸಾಮಾಜಿಕ ಅಂತರವಿಲ್ಲದೆ ಸಾಲುಗಟ್ಟಿ ನಿಂತು ಟೋಕನ್ ಪಡೆದುಕೊಂಡರು.
ಪ್ರತಿದಿನ ಒಂದು ಪ್ರಾಥಮಿಕ ಕೇಂದ್ರದಲ್ಲಿ ಇನ್ನೂರು ಜನರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಹಾಗಾಗಿ ಬೆಳಗ್ಗೆಯಿಂದಲೇ ಬಂದು ಸಾಲುಗಟ್ಟಿ ನಿಂತು ಟೋಕನ್ ಪಡೆದುಕೊಂಡು.
ಕೋವಿಡ್ ಲಸಿಕೆ ಟೋಕನ್ ಪಡೆಯಲು ಸಾಲುಗಟ್ಟಿ ನಿಂತ ವೃದ್ಧರು ಸಾಮಾಜಿಕ ಅಂತರ ಮಾಯಾ
ಕೋವಿಡ್ ಲಸಿಕೆ ಪಡೆದುಕೊಳ್ಳುಲು ಸುಮಾರು 300ಕ್ಕೂ ಹೆಚ್ಚು ಜನ ಬೆಳಗ್ಗೆ 7 ಗಂಟೆಯಿಂದ ನಗರದ ಕುವೆಂಪು ರಸ್ತೆಯಲ್ಲಿರುವ ಪ್ರಾಥಮಿಕ ತರಬೇತಿ ಕೇಂದ್ರದ ಬಳಿ ಯಾವುದೇ ಸಾಮಾಜಿಕ ಅಂತರವಿಲ್ಲದೆ ಸಾಲುಗಟ್ಟಿ ನಿಂತಿದ್ದರು.
ವ್ಯವಸ್ಥೆಯ ಕುರಿತು ಅಸಮಾಧಾನ
ಕೋವಿಡ್ ಲಸಿಕೆ ನೀಡಲು ಅವಕಾಶ ನೀಡಲಾಗಿದೆ. ಆದ್ದರಿಂದ ಹಿರಿಯ, ವಯಸ್ಕರು ಬೆಳಗ್ಗೆಯಿಂದ ಬಂದು ಸಾಲುಗಟ್ಟಿ ನಿಂತಿದ್ದೇವೆ. ಆದರೆ ಆರೋಗ್ಯ ಇಲಾಖೆಯಿಂದ ಸರಿಯಾದ ವ್ಯವಸ್ಥೆ ಮಾಡಿಲ್ಲ. ಹಾಗಾಗಿ ವೃದ್ಧರು ಬೆಳಗ್ಗೆಯಿಂದ ಬಂದು ಕಾಯುತ್ತಿದ್ದಾರೆ. ವೃದ್ಧರಿಗೆ ಕುಳಿತು ಕೊಳ್ಳಲು ಸಹ ವ್ಯವಸ್ಥೆ ಮಾಡಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.