ಶಿವಮೊಗ್ಗ: ನಾಡಿಗೆ ಬೆಳಕು ನೀಡುವ ಶರಾವತಿ ನದಿಯ ಲಿಂಗನಮಕ್ಕಿ ಜಲಾಶಯಕ್ಕೆ ಕೆಪಿಸಿ ಅಧಿಕಾರಿಗಳು ಬಾಗಿನ ಅರ್ಪಿಸಿದ್ದಾರೆ.
ಲಿಂಗನಮಕ್ಕಿ ಅಣೆಕಟ್ಟೆಯ ಕ್ರಸ್ಟ್ ಗೇಟ್ ಮಟ್ಟಕ್ಕೆ ಶರಾವತಿ ನದಿ ನೀರು ಬಂದಿರುವ ಕಾರಣ ಅಧಿಕಾರಿಗಳು ಕ್ರಸ್ಟ್ ಗೇಟ್ಗಳನ್ನು ತೆರೆದು ನೀರು ಬಿಟ್ಟು ಬಾಗಿನ ಅರ್ಪಿಸಿದರು.

ಇಂದು 1802 ಅಡಿ ನೀರು ಸಂಗ್ರಹವಾಗಿದೆ. 19.901 ಕ್ಯೂಸೆಕ್ನಷ್ಟು ಒಳಹರಿವಿದೆ. ಅಣೆಕಟ್ಟು ತುಂಬಲು ಇನ್ನೂ 17 ಅಡಿ ನೀರು ಸಂಗ್ರಹವಾಗಬೇಕಿದೆ. ಸದ್ಯ ಅಣೆಕಟ್ಟೆಯಲ್ಲಿ ಶೇ. 66ರಷ್ಟು ನೀರು ಸಂಗ್ರಹವಾಗಿದೆ.
ಬಾಗಿನ ಅರ್ಪಿಸುವ ವೇಳೆ ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಎಂಜಿನಿಯರ್ ನಾರಾಯಣ ಪಿ. ಗಜಕೋಶ್, ಸಿವಿಲ್ ವಿಭಾಗದ ಅಧೀಕ್ಷಕ ಎಂಜಿನಿಯರ್ ಆರ್.ಶಿವಕುಮಾರ್ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.