ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ನೀಡುವ ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಒಡಿಶಾದ ಖ್ಯಾತ ಕವಿ ಡಾ.ರಾಜೇಂದ್ರ ಕಿಶೋರ್ ಪಂಡಾರವರಿಗೆ ಒಲಿದಿದೆ. ಆಧುನಿಕ ಒರಿಯಾ ಸಾಹಿತ್ಯದ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರುವ ಡಾ.ರಾಜೇಂದ್ರ ಕಿಶೋರ್ ರವರು 16 ಕವನ ಸಂಕಲನಗಳನ್ನು ಒಂದು ಕಾದಂಬರಿ ಹಾಗೂ ಅಂತರ್ಜಾಲ ಸಂಪಾದನಾ ಕಾವ್ಯ ಸಂಚಯ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.
ಡಾ.ರಾಜೇಂದ್ರ ಕಿಶೋರ್ ಪಂಡಾರವರಿಗೆ ಕೇಂದ್ರದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭ್ಯವಾಗಿವೆ. ಅಂತರ್ಜಾಲ ಪತ್ರಿಕಾ ಸಂಪಾದಕರೂ ಆಗಿರುವ ಇವರಿಗೆ ಸಂಬಲ್ಪುರ್ ವಿವಿ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿದೆ. ಈಗ ಪಂಡಾರವರಿಗೆ 2020ರ ಸಾಲಿನ ಪ್ರಶಸ್ತಿ ನೀಡಲಾಗುವುದು.