ಕರ್ನಾಟಕ

karnataka

ETV Bharat / state

ಆದಾಯ ಮತ್ತು ಜಾತಿ ಪ್ರಮಾಣ ಪತ್ರಕ್ಕಾಗಿ ಪ್ರತಿಭಟನೆ - ಎಸ್ಎಸ್​ಯುಐ

ವಿದ್ಯಾರ್ಥಿಗಳ ಆದಾಯ ಹಾಗೂ ಜಾತಿ ದೃಢೀಕರಣ ಪತ್ರವನ್ನು ತ್ವರಿತಗತಿಯಲ್ಲಿ ಒದಗಿಸಬೇಕು ಎಂದು‌ ಆಗ್ರಹಿಸಿ ಶಿವಮೊಗ್ಗ ಗ್ರಾಮಾಂತರ ಎಸ್ಎಸ್​ಯುಐ ಸಂಘಟನೆ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಆದಾಯ ಮತ್ತು ಜಾತಿ ಪ್ರಮಾಣ ಪತ್ರಕ್ಕಾಗಿ ಪ್ರತಿಭಟನೆ

By

Published : May 15, 2019, 10:56 AM IST

ಶಿವಮೊಗ್ಗ : ವಿದ್ಯಾರ್ಥಿಗಳ ಆದಾಯ ಹಾಗೂ ಜಾತಿ ದೃಢೀಕರಣ ಪತ್ರವನ್ನು ತ್ವರಿತಗತಿಯಲ್ಲಿ ಒದಗಿಸಬೇಕು ಎಂದು‌ ಆಗ್ರಹಿಸಿ ಶಿವಮೊಗ್ಗ ಗ್ರಾಮಾಂತರ ಎಸ್ಎಸ್​ಯುಐ ಸಂಘಟನೆ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಈಗಾಗಲೇ ಪಿಯುಸಿ ಹಾಗೂ ಪದವಿ ತರಗತಿಗಳ ಪ್ರವೇಶ ನಡೆಯುತ್ತಿದೆ. ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಗೆ ಆದಾಯ ಹಾಗೂ ದೃಢೀಕರಣ ಪತ್ರ ಅವಶ್ಯಕತೆ ಇದೆ. ಆದಾಯ ಹಾಗೂ ಪ್ರಮಾಣ ಪತ್ರ ನೀಡಿದರೆ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ಕಡಿಮೆಯಾಗುತ್ತದೆ. ಆದರೆ ತಹಶೀಲ್ದಾರ್ ಕಚೇರಿಯಲ್ಲಿ ಪ್ರಮಾಣ ಪತ್ರ ನೀಡಲು ಸಕಾಲದಲ್ಲಿ 21 ದಿನಗಳ ಕಾಲಾವಕಾಶದ ಕಾರಣ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು

ಆದಾಯ ಮತ್ತು ಜಾತಿ ಪ್ರಮಾಣ ಪತ್ರಕ್ಕಾಗಿ ಪ್ರತಿಭಟನೆ

ಚುನಾವಣೆ ವೇಳೆ ಅಭ್ಯರ್ಥಿಗಳಿಗೆ ಒಂದೇ ದಿನಕ್ಕೆ ಆದಾಯ ಪ್ರಮಾಣ ಪತ್ರ ನೀಡಲಾಗುತ್ತದೆ. ‌ಆದ್ರೆ, ದೇಶದ ಭವಿಷ್ಯ ರೂಪಿಸುವ ವಿದ್ಯಾರ್ಥಿಗಳಿಗೆ ಆದಾಯ ಪ್ರಮಾಣ ಪತ್ರ ನೀಡಲು ಸತಾಯಿಸಲಾಗುತ್ತಿದೆ. ಅಲ್ಲದೆ ಆದಾಯ ಪ್ರಮಾಣ ಪತ್ರ ಕೊಡಿಸುವ ಬ್ರೋಕರ್ ಗಳ ಹಾವಳಿ ಹೆಚ್ಚಾಗಿದೆ. ಇದರಿಂದ ತಹಶೀಲ್ದಾರ್ ತಮ್ಮ ನಿಯಮವನ್ನು ಸಡಿಲಿಸಿ ವಿದ್ಯಾರ್ಥಿಗಳಿಗೆ ಎರಡು ದಿನಗಳಲ್ಲಿ ಪ್ರಮಾಣ ಪತ್ರ ನೀಡುವಂತೆ ಮಾಡಬೇಕು ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ABOUT THE AUTHOR

...view details