ಕರ್ನಾಟಕ

karnataka

ETV Bharat / state

ಶಿವಮೊಗ್ಗ ವಿಮಾನ ನಿಲ್ದಾಣದ ಬಾಂಬ್​​ಥ್ರೆಟ್​ ಕಂಟೆಸ್ಸರಿ ಪ್ಲಾನ್ಅ​ನ್ನು ಬೇಗ ನವೀಕರಿಸಬೇಕು: ಸಂಸದ ಬಿ ವೈ ರಾಘವೇಂದ್ರ

ಬೆಂಗಳೂರು ಶಿವಮೊಗ್ಗ ಬೆಳಗ್ಗೆ ಹಾರಾಟ ನಡೆಸುತ್ತಿದ್ದು, ಮುಂದಿನ ವಾರದಲ್ಲಿ ಸಂಜೆ ಇನ್ನೊಂದು ವಿಮಾನ ಹಾರಾಟ ನಡೆಸಲಿದೆ.

MP B Y Raghavendra spoke at the press conference.
ಸಂಸದ ಬಿ ವೈ ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

By ETV Bharat Karnataka Team

Published : Oct 28, 2023, 4:00 PM IST

Updated : Oct 28, 2023, 11:00 PM IST

ಸಂಸದ ಬಿ ವೈ ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಶಿವಮೊಗ್ಗ:ನಗರದ ನೂತನ ವಿಮಾನ ನಿಲ್ದಾಣದ ಬಾಂಬ್ ಥ್ರೇಟ್ ಕಂಟೆಸ್ಸರಿ ಪ್ಲಾನ್ ಅನ್ನು ಅದಷ್ಟು ಬೇಗ ನವೀಕರಿಸಬೇಕೆಂದು ಸಂಸದ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಿನ್ನೆ ಬೆಂಗಳೂರಿನಲ್ಲಿ ಬೃಹತ್ ಮತ್ತು ಮಧ್ಯಮ‌ ಕೈಗಾರಿಕ ಸಚಿವ ಎಂ ಬಿ ಪಾಟೀಲ್​ ಜೊತೆ ಬೆಂಗಳೂರಿನ ಕಚೇರಿಯಲ್ಲಿ ಸಭೆ ನಡೆಯಿತು.‌ ಈ ಸಭೆಯಲ್ಲಿ ಅಧಿಕಾರಿಗಳು ಹಾಜರಿದ್ದು, ವಿಮಾನ ನಿಲ್ದಾಣದ ಮುಂದಿನ ಅಭಿವೃದ್ಧಿ ಬಗ್ಗೆ ಸಾಕಷ್ಟು ಚರ್ಚೆ ನಡೆಸಲಾಯಿತು ಎಂದು ಹೇಳಿದರು.

ಈಗ ಬೆಳಗ್ಗೆ ಒಂದು ವಿಮಾನ ಬೆಂಗಳೂರು- ಶಿವಮೊಗ್ಗ ಹಾರಾಟ ನಡೆಸುತ್ತಿದೆ. ಮುಂದಿನ ವಾರದಲ್ಲಿ ಸಂಜೆ ಇನ್ನೊಂದು ವಿಮಾನ ಹಾರಾಟ ನಡೆಸಲಿದೆ. ಮುಂದಿನ ತಿಂಗಳು 22 ರಿಂದ ಸ್ಟಾರ್ ಏರ್ ಲೈನ್ಸ್ ನವರು ತಿರುಪತಿ, ಗೋವಾ, ಹೈದರಾ​ಬಾದ್ ಸೇರಿದಂತೆ ಇತರೆ ಪ್ರದೇಶಗಳಿಗೆ ಹಾರಾಟ ನಡೆಸಲಿವೆ. ಏರೋಡ್ರೋಮ್ ಸೆಕ್ಯೂರಿಟಿ ಪ್ರೋಗ್ರಾಂ ಬಾಂಬ್ ಥ್ರೆಟ್ ಕಂಟೆಸ್ಸರಿ ಪ್ಲಾನ್​ದಡಿ ಮುಂದಿನ ತಿಂಗಳು (ನವೆಂಬರ್) 23ರ ತನಕ ಲೈಸನ್ಸ್ ಅನುಮತಿ ಸಿಕ್ಕಿದೆ ಎಂದು ತಿಳಿಸಿದರು.

ಈ ಲೈಸನ್ಸ್​ ರಿನಿವಲ್ ಮಾಡಿಸಬೇಕಿದೆ. ಮುಂದಿನ ತಿಂಗಳು ಸ್ಟಾರ್ ಏರ್​ಲೈನ್ಸ್​ ಹಾರಾಟ ಪ್ರಾರಂಭಿಸಿದರೆ, ಅವರಿಗೆ ಒಂದು ವಾರ ಕಾಲ ಮಾತ್ರ ಹಾರಾಟಕ್ಕೆ ಅವಕಾಶ ಸಿಕ್ಕಹಾಗೆ ಆಗುತ್ತದೆ. ಹೀಗಾಗಿ ಅದಷ್ಟು ಬೇಗ ಲೈಸನ್ಸ್ ರಿನಿವಲ್ ಮಾಡಬೇಕಿದೆ ಎಂದು ಸಂಸದರು ಹೇಳಿದರು.

ಬಾಂಬ್ ಥ್ರೆಟ್​​ ಕಂಟೆಸ್ಸರಿ ಪ್ರೋಗ್ರಾಂ:ಕಾಯಂ ಆಗಿ ಬಾಂಬ್ ಥ್ರೆಟ್​​ ಕಂಟೆಸ್ಸರಿ ಪ್ರೋಗ್ರಾಂಗೆ ಬಜೆಟ್ 2.50 ಕೋಟಿ ಬಿಡುಗಡೆ ಮಾಡಲಾಗಿದೆ. ಈಗ ಮೊತ್ತ ಕಡಿಮೆ ಇದ್ರು ಸಹ ಟೆಂಡರ್ ಮಾಡಲು ಹೋದ್ರೆ ತಡವಾಗುತ್ತದೆ. ಸದ್ಯ ಮಾತುಕತೆ ನಡೆಸಲಾಗಿದೆ. ಇದೇ ಲೈಸನ್ಸ್ ಅನ್ನು ಒಂದೆರಡು ತಿಂಗಳು ಮುಂದೂಡಲು ಕೋರಲಾಗಿದೆ. ಈ ಲೈಸನ್ಸ್ ಇಲ್ಲದೆ ಹೋದ್ರೆ ವಿಮಾನದ ಹಾರಾಟ ಕ್ಯಾನ್ಸಲ್ ಆಗುತ್ತಿದೆ. ಈ ಲೈಸನ್ಸ್ ಗೆ ಬೇಕಾದ ಕೆಲ ವಸ್ತುಗಳು ನಮ್ಮ ದೇಶದಲ್ಲಿಯೇ ಸಿಗುತ್ತವೆ. ಮತ್ತೆ ಕೆಲವನ್ನು ಬೇರೆ ದೇಶಗಳಿಂದ ಅಮದು ಮಾಡಿಕೊಳ್ಳಬೇಕಿದೆ ಎಂದು ಮಾಹಿತಿ ನೀಡಿದರು.

ಅದಷ್ಟು ಬೇಗ ಟೆಂಡರ್ ಕರೆಯುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಹಾಲಿ ವಿಮಾನ ಹಾರಾಟವು ಪ್ರತಿನಿತ್ಯ ತಡವಾಗಿ ಹಾರಾಟವಾಗುತ್ತಿದೆ. ಮಂಜು ಸೇರಿದಂತೆ ಇತರೆ ಸಮಸ್ಯೆ ಕಾರಣವಾಗುತ್ತಿದೆ. ಇದನ್ನು ತಡೆಯಲು ವಿಮಾನಗಳು ಸರಾಗವಾಗಿ ವಿಮಾನ ನಿಲ್ದಾಣಕ್ಕೆ ವಿಮಾನ ಬರಲು ನ್ಯಾವಿಗೇಷನ್ ಸಾಮಗ್ರಿಗಳು ಬೇಕಾಗುತ್ತವೆ ಎಂದು ತಿಳಿಸಿದರು.

ರಾತ್ರಿ ವಿಮಾನ ಹಾರಾಟ ಜನವರಿ ವೇಳೆಗೆ ಪ್ರಾರಂಭವಾಗಲಿದೆ.ಅಲ್ಲಿಯ ವರೆಗೆ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಿಂದ ತಾತ್ಕಾಲಿಕವಾಗಿ ಕೆಲ ವಸ್ತುಗಳನ್ನು ತಂದು‌ ಜೋಡಿಸಿದರೆ, ವಿಮಾನ ಲ್ಯಾಂಡಿಂಗ್ ಗೆ ಅನುಕೂಲವಾಗಲಿದೆ. ವಿಮಾನ ಲ್ಯಾಂಡಿಂಗ್ ಮಾಡಲು ಬೇಕಾದ ವಿಸ್ಯುವಲ್ ಸೃಷ್ಟಿಸಬೇಕಿದೆ ಎಂದು ಹೇಳಿದರು.

ಇದು ಹೊಸ ವಿಮಾನ ನಿಲ್ದಾಣವಾದ ಕಾರಣ ಇದರಿಂದ ಆದಾಯ ಬರಲು ಕಾಲಾವಾಕಾಶ ಬೇಕಾಗುತ್ತದೆ. ಈಗ ವಿಮಾನ ನಿಲ್ದಾಣದ ನಿರ್ವಹಣೆಗೆ ವರ್ಷಕ್ಕೆ 15 ಕೋಟಿ ರೂ ಬೇಕಾಗುತ್ತದೆ. ಇದರಿಂದ ಪದೇ ಪದೆ ಹಣ ಕೇಳುವುದರ ಬದಲು ಒಟ್ಟಿಗೆ ಇಡಲು ಹಾಗೂ ಆದಾಯ ತರುವಂತಹ ಕುರಿತು ಚರ್ಚೆ ಮಾಡಲಾಯಿತು. ವಿಮಾನ ನಿಲ್ದಾಣದಲ್ಲಿ ಕಾರ್ಗೂಗೆ ಬೇಕಾದ ಜಾಗವನ್ಜು ಉಳಿಸಿಕೊಂಡು ಉಳಿದ ಜಾಗದಲ್ಲಿ ಏನೇನೂ ಆದಾಯತರುವಂತಹ ಪ್ರಯತ್ನ ಮಾಡಬಹುದು ಎಂಬುದನ್ನು ಚರ್ಚೆ ನಡೆಸಲಾಗಿದೆ.

ದಕ್ಷಿಣ ಭಾರತದ ವಿಮಾನ ನಿಲ್ದಾಣದ ಕೇಂದ್ರ: ಇನ್ನೂ ದಕ್ಷಿಣ ಭಾರತದ ವಿಮಾನ ನಿಲ್ದಾಣದ ಕೇಂದ್ರವನ್ನಾಗಿಸಲು ವಿಸ್ತಾರ ಹಾಗೂ ಇಂಡಿಗೋ ವಿಮಾನ ಸಂಸ್ಥೆಗೆ ಮನವಿ ಕೇಳಿಕೊಳ್ಳಲಾಗಿದೆ. ಅವರು ಬಂದು ಸರ್ವೇ ನಡೆಸಲು ಬರುವುದಾಗಿ ತಿಳಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಟ್ರೈನಿಂಗ್ ಸೆಂಟರ್ ಮಾಡಲು ಸಹ ಮನವಿ ಮಾಡಲಾಯಿತು.‌

ನಿನ್ನೆ ಒಳ್ಳೆಯ ರೀತಿಯ ಚರ್ಚೆ ನಡೆಲಾಯಿತು. ಈಗ ಎಟಿಆರ್ ವಿಮಾನಗಳು ಮಾತ್ರ ಹಾರಾಟ ಮಾಡುತ್ತಿವೆ. ಅಲ್ಲದೆ ಏರ್​ಶೋ ಹಾರಾಟಕ್ಕೆ ತಯಾರಿ‌ ಮಾಡಲು ಶಿವಮೊಗ್ಗ ವಿಮಾನ ನಿಲ್ದಾಣ ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಈ ವೇಳೆ ಬಿಜೆಪಿ ಮುಖಂಡ ರುದ್ರೇಗೌಡ, ಶಾಸಕ ಚನ್ನಬಸಪ್ಪ, ದತ್ತಾತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂಓದಿ:ಬಿಜೆಪಿಯವರು 2500 ಎಂಎಲ್​​​ಎಗಳನ್ನು ಖರೀದಿ ಮಾಡಿದ್ದಾರೆ : ಸಚಿವ ಸಂತೋಷ್​ ಲಾಡ್

Last Updated : Oct 28, 2023, 11:00 PM IST

ABOUT THE AUTHOR

...view details