ಶಿವಮೊಗ್ಗ :ನಾಳೆ ಸಾಗರ ತಾಲೂಕು ಕಾಗೋಡು ಗ್ರಾಮದಲ್ಲಿ ನಡೆಯಬೇಕಿದ್ದ ಕಾಗೋಡು ಹೋರಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡದೆ ಇರುವುದಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಗೋಡು ಹೋರಾಟಕ್ಕೆ ಅನುಮತಿ ನೀಡದ ಜಿಲ್ಲಾಡಳಿತ.. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಕ್ರೋಶ
ಈ ಹಿಂದೆ ನಡೆದ ಕಾಗೋಡು ಸತ್ಯಾಗ್ರಹ ಚಳವಳಿಗೆ ಸಮಾಜವಾದಿ ನಾಯಕ ರಾಮ್ ಮನೋಹರ ಲೋಹಿಯಾ ಅವರು ಆಗಮಿಸಿ ಚಳವಳಿಗೆ ಚಾಲನೆ ನೀಡಿದ್ದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಸಹ ಇದೇ ಹೋರಾಟದ ಮೂಲಕ ರಾಜಕೀಯಕ್ಕೆ ಪ್ರವೇಶ ಪಡೆದಿದ್ದರು..
ಭೂ ರಹಿತರ ಪರ ಹೋರಾಟ ಪ್ರಾರಂಭವಾಗಿ ಜೀತದಾಳುಗಳನ್ನು ಭೂ ಒಡೆಯರನ್ನಾಗಿ ಮಾಡಿದ ಕಾಗೋಡು ಚಳವಳಿಯ ನೆನಪು ಹಾಗೂ ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯ್ದೆ ಖಂಡಿಸಿ ನಾಳೆ ಸಾಗರ ತಾಲೂಕಿನಲ್ಲಿ ಕಾಂಗ್ರೆಸ್ ಕಾಗೋಡು ಭೂ ಹೋರಾಟದ ಹೆಸರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಂಡಿತ್ತು. ಈ ಹಿಂದೆ ನಡೆದ ಕಾಗೋಡು ಸತ್ಯಾಗ್ರಹ ಚಳವಳಿಗೆ ಸಮಾಜವಾದಿ ನಾಯಕ ರಾಮ್ ಮನೋಹರ ಲೋಹಿಯಾ ಅವರು ಆಗಮಿಸಿ ಚಳವಳಿಗೆ ಚಾಲನೆ ನೀಡಿದ್ದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಸಹ ಇದೇ ಹೋರಾಟದ ಮೂಲಕ ರಾಜಕೀಯಕ್ಕೆ ಪ್ರವೇಶ ಪಡೆದಿದ್ದರು.
ಇಂತಹ ಐತಿಹಾಸಿಕ ಸ್ಥಳ ಕಾಗೋಡು ಗ್ರಾಮದಲ್ಲಿ ಚಳವಳಿ ನಡೆಸಲು ಅವಕಾಶ ನೀಡದೆ, ಪ್ರಜಾಪ್ರಭುತ್ವದಲ್ಲಿ ದಮನಕಾರಿ ನೀತಿಯನ್ನು ರಾಜ್ಯ ಸರ್ಕಾರ ಅನುಸರಿಸುತ್ತಿದೆ. ಚಳವಳಿಗಾರರ ಹೋರಾಟ ಹತ್ತಿಕ್ಕುವ ನೀತಿಗೆ ನಮ್ಮ ವಿರೋಧವಿದೆ. ಸದ್ಯ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಮುಂದೆ ನಾವು ಹೋರಾಟ ಮಾಡಿಯೇ ಮಾಡುತ್ತೇವೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.