ಶಿವಮೊಗ್ಗ:ಜಿಲ್ಲೆಯಗ್ರಾಮಾಂತರ ಪೊಲೀಸ್ ಠಾಣೆಗೆ ಶನಿವಾರ ಬೆಳಗ್ಗೆ ಎನ್ಐಎ ತಂಡ ಆಗಮಿಸಿದ್ದು, ಜನರಲ್ಲಿ ಸಂಚಲನ ಸೃಷ್ಟಿಸಿದೆ. ಅಕ್ಟೋಬರ್ ತಿಂಗಳಲ್ಲಿ ದಾಖಲಾಗಿದ್ದ ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕಲು ಎನ್ಐಎ ತಂಡ ಆಗಮಿಸಿದ್ದರು ಎನ್ನಲಾಲಗ್ತಿದೆ.
ಪ್ರಕರಣ ಏನು?:ಶಿವಮೊಗ್ಗದ ಆರೋಪಿ ಸೈಯದ್ ಯಾಸೀನ್ ಹಾಗೂ ಮಾಜ್ ಮುನೀರ್ ವಿರುದ್ಧ ಯುಎಪಿಎ ಪ್ರಕರಣ ದಾಖಲಾಗಿತ್ತು. ಸೈಯದ್ ಯಾಸೀನ್ ತುಂಗಾ ನದಿ ದಡದಲ್ಲಿ ಕಚ್ಚಾ ಬಾಂಬ್ ತಯಾರಿಸಿ, ಬ್ಲಾಸ್ಟ್ ಮಾಡಿದ್ದರು.