ಕರ್ನಾಟಕ

karnataka

ETV Bharat / state

ಹರ್ಷ ಕೊಲೆ ಪ್ರಕರಣ.. ಶಿವಮೊಗ್ಗದಲ್ಲಿ ಎನ್​​ಐಎ ತನಿಖೆ ಚುರುಕು - NIA team to shivamogga

ಶಿವಮೊಗ್ಗದ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಐಎ ತನಿಖೆ ಚುರುಕೊಳಿಸಿದೆ.

NIA investigation on Harsha murder case
ಹರ್ಷ ಕೊಲೆ ಪ್ರಕರಣದ ಎನ್​​ಐಎ ತನಿಖೆ

By

Published : Jun 30, 2022, 1:27 PM IST

ಶಿವಮೊಗ್ಗ: ಬಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ತಂಡ(ಎನ್​ಐಎ)ದ ಹಿರಿಯ ಅಧಿಕಾರಿಗಳು ಶಿವಮೊಗ್ಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಒಟ್ಟು 8 ವಾಹನಗಳಲ್ಲಿ ಬುಧವಾರ ಸಂಜೆ ಹೊತ್ತಿಗೆ ಶಿವಮೊಗ್ಗ ನಗರಕ್ಕೆ ರಾಷ್ಟ್ರೀಯ ತನಿಖಾ ದಳದ ಹಿರಿಯ ಅಧಿಕಾರಿಗಳು ಭೇಟಿ ‌ನೀಡಿದ್ದಾರೆ. ಇಂದು ಪ್ರಕರಣದ ಆರೋಪಿಗಳ ಮನೆ ಸೇರಿದಂತೆ ಒಟ್ಟು 18 ಕಡೆಗಳಿಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಕೆಲವೆಡೆ ಭೇಟಿ ನೀಡಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕೊಲೆಗೀಡಾದ ಹರ್ಷ

ಈ ತಂಡದಲ್ಲಿ ಕೇರಳ, ಆಂಧ್ರ ಪ್ರದೇಶ, ತಮಿಳುನಾಡಿನ ಹಿರಿಯ ಅಧಿಕಾರಿಗಳು ಇದ್ದಾರೆ. ಹರ್ಷ ಹತ್ಯೆಯಲ್ಲಿ ವಿವಿಧ ಸಂಘಟನೆಗಳ ಕೈವಾಡ ಇದೆ ಎಂಬ ಆರೋಪ ಕೇಳಿ ಬಂದಿತ್ತು ಹಾಗೂ ರಾಷ್ಟ್ರೀಯ ತನಿಖಾ ದಳದಿಂದ ಈ ಪ್ರಕರಣದ ತನಿಖೆ ಆಗಬೇಕು ಎಂದು ಆಗ್ರಹಿಸಲಾಗಿತ್ತು. ಈ ಹಿನ್ನೆಲೆ ಸರ್ಕಾರ ಪ್ರಕರಣವನ್ನು ಎನ್ಐಎಗೆ ನೀಡಿತ್ತು.

ಇದನ್ನೂ ಓದಿ:ಬೆಳಗಾವಿಯಲ್ಲಿ ರಸ್ತೆ ಬದಿಯೇ ನೇತಾಡಿದ ಶವ: ಬೆಚ್ಚಿಬಿದ್ದ ವಾಯುವಿಹಾರಿಗಳು

ABOUT THE AUTHOR

...view details