ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಚು ಪ್ರಕರಣ: ಇಬ್ಬರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಐಎ - ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ

ಶಿವಮೊಗ್ಗದಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಚು ಪ್ರಕರಣದ ಕುರಿತಂತೆ ಇಬ್ಬರು ಆರೋಪಿಗಳ ವಿರುದ್ಧ ಎನ್‌ಐಎ ಗುರುವಾರ ಚಾರ್ಜ್‌ಶೀಟ್ ಸಲ್ಲಿಸಿದೆ.

NIA filed a Chargesheet against two accused
ಶಿವಮೊಗ್ಗದಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಚು ಪ್ರಕರಣ: ಇಬ್ಬರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಐಎ

By

Published : Mar 17, 2023, 4:23 PM IST

ನವದೆಹಲಿ: ಶಿವಮೊಗ್ಗದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಚು ಪ್ರಕರಣದ ಇಬ್ಬರು ಆರೋಪಿಗಳ ವಿರುದ್ಧ ಎನ್‌ಐಎ ಗುರುವಾರ ಚಾರ್ಜ್‌ಶೀಟ್ ಸಲ್ಲಿಸಿದೆ. ಕರ್ನಾಟಕದಲ್ಲಿ ವಿಧ್ವಂಸಕ ಕೃತ್ಯಗಳನ್ನು ಮತ್ತು ಹಿಂಸಾಚಾರಗಳನ್ನು ನಡೆಸುವ ಮೂಲಕ ಇಸ್ಲಾಮಿಕ್ ಸ್ಟೇಟ್‌ನ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಲು ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಐಎ ಈ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದೆ.

ಆಗಸ್ಟ್ 15, 2022 ರಂದು ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಎಂಬಾತನನ್ನು ಆರೋಪಿ ಜಬೀವುಲ್ಲಾ ಮತ್ತು ಇತರರು ಚೂರಿಯಿಂದ ಇರಿದ ನಂತರ ಕರ್ನಾಟಕ ಪೊಲೀಸರು ದಾಖಲಿಸಿದ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸೆಪ್ಟೆಂಬರ್ 2022 ರಲ್ಲಿ ಮರು ನೋಂದಾಯಿಸಿಕೊಂಡಿತ್ತು. ಕರ್ನಾಟಕ ಪೊಲೀಸರು ದಾಖಲಿಸಿದ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿತ್ತು.

ಶಿವಮೊಗ್ಗದ ಮಾಜ್ ಮುನೀರ್ ಅಹಮದ್ (23 ವರ್ಷ) ಮತ್ತು ಸೈಯದ್ ಯಾಸಿನ್ (22 ವರ್ಷ) ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 121 ಎ ಮತ್ತು 122, ಯುಎ (ಪಿ) ಕಾಯ್ದೆ, 1967 ರ ಸೆಕ್ಷನ್ 18, 18 ಬಿ, 20 ಮತ್ತು 38 ಮತ್ತು ಇಎಸ್ ಕಾಯ್ದೆ, 1908 ರ ಸೆಕ್ಷನ್ 4 (ಐ) ಮತ್ತು 5 ರ ಅಡಿ ಪ್ರಕರಣ ದಾಖಲಿಸಲಾಗಿದೆ.

ನಿಜಾಮಾಬಾದ್ ಪ್ರಕರಣದಲ್ಲಿ ಎರಡನೇ ಚಾರ್ಜ್‌ಶೀಟ್ ಸಲ್ಲಿಸಿದ ಎನ್​ಐಎ:ಮತ್ತೊಂದು ಪ್ರಕರಣದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತರು ಯುವಕರನ್ನು ಪ್ರಚೋದಿಸುವುದು ಮತ್ತು ತೀವ್ರಗಾಮಿಗಳನ್ನಾಗಿ ಮಾಡುವುದು, ನಿಷೇಧಿತ ಸಂಘಟನೆಗೆ ನೇಮಕ ಮಾಡಿಕೊಳ್ಳುವುದು ಮತ್ತು ನಿರ್ದಿಷ್ಟವಾಗಿ ಆಯೋಜಿಸಲಾದ ತರಬೇತಿ ಶಿಬಿರಗಳಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡುವುದು ಕಂಡು ಬಂದಿದೆ ಎಂದು ನಿಜಾಮಾಬಾದ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನ್ನ ಹೊಸ ಚಾರ್ಜ್ ಶೀಟ್​ ಸಲ್ಲಿಸಿದೆ.

ಐವರು ಆರೋಪಿಗಳಾದ ಶೇಕ್ ರಹೀಂ ಅಲಿಯಾಸ್ ಅಬ್ದುಲ್ ರಹೀಂ, ಶೇಕ್ ವಹೈದ್ ಅಲಿ ಅಲಿಯಾಸ್ ಅಬ್ದುಲ್ ವಹೇದ್ ಅಲಿ, ಜಫ್ರುಲ್ಲಾ ಖಾನ್ ಪಠಾಣ್, ಶೇಕ್ ರಿಯಾಜ್ ಅಹ್ಮದ್ ಮತ್ತು ಅಬ್ದುಲ್ ವಾರಿಸ್ ಅವರ ಹೆಸರನ್ನು ಉಲ್ಲೇಖಿಸಿ ಹೈದರಾಬಾದ್‌ನ ವಿಶೇಷ ಎನ್‌ಐಎ, ನ್ಯಾಯಾಲಯಕ್ಕೆ ಸಿಬಿಐ ಪೂರಕ ಚಾರ್ಜ್ ಶೀಟ್ ಸಲ್ಲಿಸಿದೆ. ಅವರನ್ನು ಐಪಿಸಿಯ ಸೆಕ್ಷನ್ 120ಬಿ, 153ಎ ಮತ್ತು ಯುಎ (ಪಿ) ಆಕ್ಟ್, 1967ರ ಸೆಕ್ಷನ್ 13(1)(ಬಿ), 18, 18 ಎ ಮತ್ತು 18 ಬಿ ಅಡಿ ಚಾರ್ಜ್ ಶೀಟ್ ದಾಖಲಿಸಲಾಗಿದೆ. ಆಗಸ್ಟ್ 2022 ರಲ್ಲಿ ತೆಲಂಗಾಣ ಪೊಲೀಸರಿಂದ ತನಿಖೆ ವಹಿಸಿಕೊಂಡ ನಂತರ ಎನ್ಐಎ ಈ ಪ್ರಕರಣದ 11 ಆರೋಪಿಗಳ ವಿರುದ್ಧ 2022ರ ಡಿಸೆಂಬರ್‌ನಲ್ಲಿ ತನ್ನ ಮೊದಲ ಚಾರ್ಜ್‌ಶೀಟ್ ಸಲ್ಲಿಸಿತ್ತು. ಕಳೆದ ವರ್ಷ ಜುಲೈ 4 ರಂದು ತೆಲಂಗಾಣ ಪೊಲೀಸರು ಈ ಪ್ರಕರಣವನ್ನು ದಾಖಲಿಸಿದ್ದರು.

ಆರೋಪಪಟ್ಟಿಯಲ್ಲಿ ಇರುವ ಆರೋಪಿಗಳು ತರಬೇತಿ ಪಡೆದ ಪಿಎಫ್ಐ ಕಾರ್ಯಕರ್ತರಾಗಿದ್ದು, ಯುವಕರನ್ನು ಪ್ರಚೋದಿಸುವುದು ಮತ್ತು ತೀವ್ರಗಾಮಿಗಳನ್ನಾಗಿ ಮಾಡುವುದು, ಅವರನ್ನು ಪಿಎಫ್ಐಗೆ ನೇಮಕ ಮಾಡುವುದು ಮತ್ತು ನಿರ್ದಿಷ್ಟವಾಗಿ ಆಯೋಜಿಸಲಾದ ಪಿಎಫ್ಐ ತರಬೇತಿ ಶಿಬಿರಗಳಲ್ಲಿ ಶಸ್ತ್ರಾಸ್ತ್ರ ತರಬೇತಿ ಕೊಡಿಸುವುದು ಕಂಡುಬಂದಿದೆ ಎಂದು ಎನ್ಐಎ ತನ್ನ ಚಾರ್ಜ್​ ಶೀಟ್​ನಲ್ಲಿ ಹೇಳಿದೆ. "2047 ರ ವೇಳೆಗೆ ದೇಶದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಪಿತೂರಿಯನ್ನು ಮುಂದುವರಿಸಲು ಹಿಂಸಾತ್ಮಕ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವುದು ಇದರ ಉದ್ದೇಶವಾಗಿತ್ತು" ಎಂದು ಭಯೋತ್ಪಾದನಾ ನಿಗ್ರಹ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ:ಶಿವಮೊಗ್ಗಕ್ಕೂ ಉಗ್ರರ ನಂಟು: ಶಂಕಿತ ಯುವಕರ ಬಂಧನ - ಎಸ್​ಪಿ ಮಾಹಿತಿ

ABOUT THE AUTHOR

...view details