ಕರ್ನಾಟಕ

karnataka

ETV Bharat / state

ಮದುವೆಯಾದ ನಾಲ್ಕೇ ದಿನಕ್ಕೆ ನವ ವಿವಾಹಿತೆ ಕೊರೊನಾಗೆ ಬಲಿ - ಶಿವಮೊಗ್ಗ ಕೊರೊನಾ ನ್ಯೂಸ್​

ಮದುವೆಯಾದ ನಾಲ್ಕೇ ದಿನಕ್ಕೆ ನವ ವಿವಾಹಿತೆಯೊಬ್ಬರು ಕೊರೊನಾಗೆ ಬಲಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಕೊರೊನಾಗೆ ಬಲಿ
ಕೊರೊನಾಗೆ ಬಲಿ

By

Published : May 28, 2021, 9:30 PM IST

ಶಿವಮೊಗ್ಗ:ಮದುವೆಯಾದ ನಾಲ್ಕೇ ದಿನಕ್ಕೆ ನವ ವಿವಾಹಿತೆಯೊಬ್ಬರು ಕೊರೊನಾಗೆ ಬಲಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ಹೊರವಲಯ ಮಲವಗೊಪ್ಪದ ನಿವಾಸಿ ಪೂಜಾ(24) ಮೃತ ನವ ವಿವಾಹಿತೆ. ಈಕೆ ಹರಿಗೆ ಬಡಾವಣೆಯ ಮಹೇಶ್ ಎಂಬವರನ್ನು ಕಳೆದ ಸೋಮವಾರ ವರಿಸಿದ್ದರು. ಮದುವೆಯಾದ ಮರು‌ ದಿನವೇ ಮೈ- ಕೈ‌ ನೋವೆಂದು ಮನೆಯಲ್ಲಿಯೇ ಚಿಕಿತ್ಸೆ ಪಡೆದಿದ್ದಾರೆ.

ನಾಲ್ಕು ದಿನದ ಹಿಂದೆ ಮದುವೆಯಾಗಿದ್ದ ಜೋಡಿ

ಇಂದು ಮಲವಗೊಪ್ಪದ ಸಾಯಿ ಕ್ಲಿನಿಕ್​ನಲ್ಲಿ ತುಂಬಾ ಸುಸ್ತಾಗುತ್ತಿದೆ ಎಂದು ಗ್ಲುಕೋಸ್​ ಹಾಕಿಸಿದ್ದಾರೆ. ಈ ವೇಳೆ ಪೂಜಾ ತೀವ್ರ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ಕರೆದು‌ಕೊಂಡು ಹೋಗಿದ್ದಾರೆ. ಅಷ್ಟರಲ್ಲಿ ಪೂಜಾ ಪ್ರಾಣಪಕ್ಷಿ‌ ಹಾರಿ ಹೋಗಿದೆ. ದಾಂಪತ್ಯ ಜೀವನದ ಕನಸು ಕಂಡಿದ್ದ ಮಹೇಶ್ ಹಾಗೂ ಆತನ ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ.

ABOUT THE AUTHOR

...view details