ಶಿವಮೊಗ್ಗ:ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವಕ-ಯುವತಿ ಓಡಿ ಹೋಗಿ ಮದುವೆಯಾಗಿದ್ದು, ವಿವಾಹಕ್ಕೆ ಹುಡುಗಿ ಮನೆಯಿಂದ ವಿರೋಧವಿದೆ. ಇದರಿಂದ ಹೆದರಿದ ನವಜೋಡಿ ರಕ್ಷಣೆಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇಲ್ಲಿನ ವಿನೋಬ ನಗರದ ನಟೇಶ್ ಹಾಗೂ ರವೀಂದ್ರ ನಗರದ ಸ್ವಾತಿ ಪರಸ್ಪರ ಪ್ರೀತಿಸುತ್ತಿದ್ದರು. ಇವರು ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದು,ಯುವತಿ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಮನೆ ಬಿಟ್ಟುಹೋಗಿ ಮದುವೆಯಾಗಿದ್ದರು.
ಶಿವಮೊಗ್ಗದಲ್ಲಿ ರಕ್ಷಣೆ ಕೋರಿ ಪೊಲೀಸರ ಮೊರೆ ಹೋದ ನವಜೋಡಿ ಹೇಳಿದ್ದೇನು? ನೋಡಿ ಈ ವೇಳೆ ಯುವತಿ ಮನೆಯವರು ನಾವೇ ಮದುವೆ ಮಾಡಿಸುತ್ತೇವೆ ಎಂದು ಮನವೊಲಿಸಿ ಕರೆ ತಂದಿದ್ದಾರೆ. ಆದರೆ ಬಳಿಕ ಸ್ವಾತಿಯನ್ನು ನಟೇಶ್ನಿಂದ ದೂರ ಮಾಡಲು ಯತ್ನಿಸಿದ್ದರು. ಜೊತೆಗೆ ಯುವತಿಯನ್ನು ಬಳ್ಳಾರಿ ಜಿಲ್ಲೆಯ ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ಇದರಿಂದ ರೋಸಿ ಹೋದ ಸ್ವಾತಿ ಮತ್ತೆ ಮನೆಯಿಂದ ತಪ್ಪಿಸಿಕೊಂಡು ಪ್ರಿಯತಮನೊಂದಿಗೆ ಮದುವೆ ಆಗಿದ್ದಾಳೆ.
ತನ್ನ ಮನೆಯವರಿಂದ ಪತಿ ನಟೇಶ್ ಹಾಗೂ ಆತನ ಮನೆಯವರಿಗೆ ಸಮಸ್ಯೆಯಾಗುತ್ತಿದೆ. ನಟೇಶ್ ತಂದೆಗೆ ಹೃದಯ ಸಂಬಂಧಿ ಸಮಸ್ಯೆಯಿದೆ. ಆದರೂ ಅವರನ್ನು ಪೊಲೀಸ್ ಠಾಣೆಗೆ ಕರೆಸಲಾಗುತ್ತಿದೆ ಎಂದು ಆರೋಪಿಸಿ ಪತಿಯೊಂದಿಗೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಗೆ ತೆರಳಿ ರಕ್ಷಣೆಗಾಗಿ ಮನವಿ ಮಾಡಿದರು.
ಇದನ್ನೂ ಓದಿ:ರಸ್ತೆಯಲ್ಲಿ ಅಡ್ಡಬಂದ ಬೀದಿನಾಯಿ ರಕ್ಷಿಸಲು ಹೋಗಿ ಆಟೋ ಪಲ್ಟಿ: ಐವರ ದುರ್ಮರಣ, ಇಬ್ಬರಿಗೆ ಗಾಯ