ಶಿವಮೊಗ್ಗ:ನಗರದ ಪುರಾತನ ಕಟ್ಟಡಗಳಲ್ಲಿ ಒಂದಾದ ನೀರಾವರಿ ಇಲಾಖೆಯ ಕಟ್ಟಡದ ರಿಪೇರಿ ಕಾರ್ಯ ಆರಂಭವಾಗಿದೆ. 1855ರಲ್ಲಿ ನಿರ್ಮಾಣವಾದ ಈ ಕಟ್ಟಡವು ಸರಿಯಾದ ನಿರ್ವಹಣೆಯಿಲ್ಲದೆ ಮಳೆಗಾಲದಲ್ಲಿ ಸೋರುತ್ತಿತ್ತು. ಇದೀಗ ಇಲಾಖೆ ರಿಪೇರಿ ಕಾರ್ಯಕ್ಕೆ ಹಣ ಮಂಜೂರು ಮಾಡಿದೆ.
ಮಳೆಗಾಲದಲ್ಲಿ ಮಳೆ ನೀರು ಕಚೇರಿಯೊಳಗೆ ಬರುತ್ತಿತ್ತು. ಇದರಿಂದ ಕಚೇರಿ ಸಿಬ್ಬಂದಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಮೇಲಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ನೀರಾವರಿ ಇಲಾಖೆಯ ಸರ್ವೆ ಕಾರ್ಯ ನಡೆಸುವ ಕಚೇರಿಯು ಕನಿಷ್ಠ ಸೌಲಭ್ಯದಿಂದ ವಂಚಿತವಾಗಿ ಹಳೆಯ ಕಡತಗಳು ನಾಶವಾಗುತ್ತಿವೆ ಎಂಬ ಭಯದಲ್ಲಿದ್ದ ಸಿಬ್ಬಂದಿ ಈಗ ನಿರಾಳರಾಗಿದ್ದಾರೆ ಎಂದು ಕಛೇರಿಯ ಕಾರ್ಯಪಾಲಕಿ ಚೈತ್ರಾ ತಿಳಿಸಿದರು.