ಕರ್ನಾಟಕ

karnataka

ETV Bharat / state

ಕುಮಾರಸ್ವಾಮಿ ನಾಲ್ಕು ದಿನ ಆರ್​​ಎಸ್​​​ಎಸ್​​ ಶಾಖೆಗೆ ಬಂದು ಆಮೇಲೆ ಟೀಕಿಸಲಿ: ಕಟೀಲ್

ದೇಶದಲ್ಲಿ ಇರೋದು ಬಿಜೆಪಿ ಸರ್ಕಾರ ಅಲ್ಲ. ಅದು ಆರ್​ಎಸ್​ಎಸ್​ ಸರ್ಕಾರ. ಬಿಜೆಪಿ ಬದಲು ಅಧಿಕಾರ ಚಲಾಯಿಸುತ್ತಿರೋದು ಆರ್​ಎಸ್​ಎಸ್​ ಎಂದು ಟೀಕಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿಗೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಪ್ರತ್ಯುತ್ತರ ನೀಡಿದ್ದಾರೆ.

nalin-kumar-kateel
ನಳಿನ್ ಕುಮಾರ್ ಕಟೀಲ್

By

Published : Oct 6, 2021, 10:33 AM IST

ಶಿವಮೊಗ್ಗ: ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗೆ ಒಂದು ವಾರ ಬರುವಂತೆ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್ ಆಹ್ವಾನಿಸಿದ್ದಾರೆ.

ನಗರದಲ್ಲಿ ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಯಾವುದೇ ಸಂಘ- ಸಂಸ್ಥೆಯನ್ನು ಟೀಕೆ ಮಾಡುವ ಮುನ್ನ ಮೊದಲು ಅದರ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

'ಹೆಚ್​ಡಿಕೆ 4 ದಿನ ಆರ್​​ಎಸ್​​​ಎಸ್​​ ಶಾಖೆಗೆ ಬಂದು ಆಮೇಲೆ ಟೀಕೆ ಮಾಡಲಿ'

ಕುಮಾರಸ್ವಾಮಿ ನಾಲ್ಕು ದಿನ ಶಾಖೆಗೆ ಬರಲಿ, ಆಮೇಲೆ ಸಂಘದ ಬಗ್ಗೆ ಟೀಕೆ ಮಾಡಲಿ. ಅವರು ಅಧಿಕಾರದಲ್ಲಿದ್ದಾಗ ಅವರ ಕುಟುಂಬದವರಿಗೆ ಸಹಾಯ ಮಾಡಿಕೊಂಡು ಬಂದವರು. ಅವರಿಗೆ ರಾಷ್ಟ್ರಭಕ್ತಿ, ದೇಶದ ಪರಿಕಲ್ಪನೆ, ಚಿಂತನೆಗಳಿಲ್ಲ. ಪಾರ್ಟಿಯನ್ನೇ ಕುಟುಂಬ ರಾಜಕಾರಣಕ್ಕೆ ತಂದವರು, ಅವರಿಗೆ ಆರ್​ಎಸ್​ಎಸ್ ವಿಚಾರಧಾರೆಗಳೇನು ಅಂತ ತಿಳಿದಿಲ್ಲ. ಸಂಘ ಇಂದು ಸಂಸ್ಕಾರ, ದೇಶಭಕ್ತಿ ಸಾರುವ ಕೆಲಸ ಮಾಡುತ್ತಿದೆ ಎಂದು ಕಟೀಲ್ ಹೇಳಿದರು.

'ಸಂಘ ಅಧಿಕಾರಿಗಳನ್ನು ನಿರ್ಮಿಸುತ್ತಿಲ್ಲ'

ಸಂಘ ವ್ಯಕ್ತಿ ನಿರ್ಮಾಣದ ಮೂಲಕ ದೇಶ ಕಟ್ಟುವ ಕೆಲಸ ಮಾಡುತ್ತಿದೆ. ಇವತ್ತು ರಾಷ್ಟ್ರಪತಿ, ಪ್ರಧಾನಮಂತ್ರಿ ಇಬ್ಬರೂ ಸ್ವಯಂಸೇವಕರೇ. ಜನತಾದಳದಲ್ಲೂ ಸ್ವಯಂಸೇವಕರಿದ್ದಾರೆ. ಕಾಂಗ್ರೆಸ್​​​ನಲ್ಲೂ ಸಹ ಸ್ವಯಂ ಸೇವಕರಿದ್ದಾರೆ. ಇಂದು ಸಂಘ ಪ್ರವೇಶ ಮಾಡದ ಜಾಗವಿಲ್ಲ. ಅಧಿಕಾರಿಗಳನ್ನು ನಿರ್ಮಾಣ ಮಾಡಲು ಸಂಘ ಗುರಿ ಇಟ್ಟುಕೊಂಡಿಲ್ಲ, ಸಂಘ ರಾಷ್ಟ್ರ ನಿರ್ಮಾಣದ ಗುರಿಯನ್ನು ಇಟ್ಟುಕೊಂಡಿದೆ ಎಂದರು.

ಇದನ್ನೂ ಓದಿ:ಸಚಿವ ಕೆ.ಎಸ್.ಈಶ್ವರಪ್ಪ ಹೆಸರಲ್ಲಿ 36 ಲಕ್ಷ ರೂ. ವಂಚನೆ, ಇಬ್ಬರ ಬಂಧನ

ABOUT THE AUTHOR

...view details