ಶಿವಮೊಗ್ಗ:ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರ ಮನೆಗೆ ಭೇಟಿ ನೀಡಿದ್ದರು.
ಈಶ್ವರಪ್ಪ ಮನೆಯಲ್ಲಿ ಭೋಜನ ಸವಿದ ಕಟೀಲ್: ಅರ್ಧ ಗಂಟೆ ಮಾತುಕತೆ - KS Eshwarappa latest news
ಸಚಿವ ಕೆ.ಎಸ್.ಈಶ್ವರಪ್ಪ ಮನೆಗೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅರ್ಧ ಗಂಟೆ ಮಾತುಕತೆ ನಡೆಸಿದ್ದಾರೆ. ಕಟೀಲ್ ಇದಕ್ಕೂ ಮುನ್ನ ಈಶ್ವರಪ್ಪನವರ ಜೊತೆ ಭೋಜನ ಸವಿದರು.

ಈಶ್ವರಪ್ಪನವರ ಮನೆಗೆ ಭೇಟಿ ನೀಡಿದ ನಳಿನ್ ಕುಮಾರ್ ಕಟೀಲ್
ಮಲ್ಲೇಶ್ವರ ನಗರದ ಈಶ್ವರಪ್ಪ ನಿವಾಸಕ್ಕೆ ಮಧ್ಯಾಹ್ನ ಭೇಟಿ ನೀಡಿದ ಕಟೀಲ್, ಸಚಿವ ಈಶ್ವರಪ್ಪನವರ ಜೊತೆ ಭೋಜನ ಸವಿದರು. ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಶಿವಮೊಗ್ಗದ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಕಟೀಲ್, ನಂತರ ಈಶ್ವರಪ್ಪ ಮನೆಗೆ ಭೇಟಿ ನೀಡಿದ್ದಾರೆ.
ಊಟದ ಬಳಿಕ ಕಟೀಲ್ ಹಾಗೂ ಈಶ್ವರಪ್ಪ 30 ನಿಮಿಷ ಮಾತುಕತೆ ನಡೆಸಿದ್ದಾರೆ. ನಂತರ ಕಟೀಲ್ ವಾಪಸ್ ಆಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿ ವೇಳೆ ಸಚಿವರ ಪುತ್ರ ಕಾಂತೇಶ್ ಕೂಡ ಹಾಜರಿದ್ದು, ಅವರನ್ನು ಸ್ವಾಗತಿಸಿದರು.