ಕರ್ನಾಟಕ

karnataka

ETV Bharat / state

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಪ್ರಾಣೇಶ್ ಹಾಸ್ಯಕ್ಕೆ ನಕ್ಕು ನಲಿದ​ ಕೈದಿಗಳು - ಗಂಗಾವತಿ ಪ್ರಾಣೇಶ್

ಶಿವಮೊಗ್ಗದ ಕೇಂದ್ರ ಕಾರಾಗೃಹ ಸಭಾಂಗಣದಲ್ಲಿ ನಗೆ ಹಬ್ಬ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದ್ದು, ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಹಾಗೂ ಬಸವರಾಜ್ ಮಾಮನಿ ಕೈದಿಗಳಿಗೆ ತಮ್ಮ ಹಾಸ್ಯದ ಮಾತುಗಳಿಂದ ನಕ್ಕು ನಲಿಸಿದರು.

Nagehabba program at Shimoga Central Prison
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಪ್ರಾಣೇಶ್​ ಪಂಚ್

By

Published : Feb 17, 2021, 7:09 AM IST

Updated : Feb 17, 2021, 7:47 AM IST

ಶಿವಮೊಗ್ಗ:ಕಾರಾಗೃಹದಲ್ಲಿ ಮನಪರಿವರ್ತನೆ ತರುವ ಸಲುವಾಗಿ ಮೊದಲ ಹಂತವಾಗಿ ನಗರದ ಹೊರ ವಲಯದ ಸೋಗಾನೆ ಕೇಂದ್ರ ಕಾರಾಗೃಹ ಸಭಾಂಗಣದಲ್ಲಿ ನಗೆ ಹಬ್ಬ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು.

ಪ್ರಾಣೇಶ್ ಹಾಸ್ಯಕ್ಕೆ ನಕ್ಕು ನಲಿದ​ ಕೈದಿಗಳು

ಗಂಗಾವತಿ ಬೀಚಿ ಎಂದೇ ಖ್ಯಾತಿ ಪಡೆದಿರುವ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಹಾಗೂ ಬಸವರಾಜ್ ಮಾಮನಿ ಅವರು ಕೈದಿಗಳಿಗೆ ತಮ್ಮ ಹಾಸ್ಯದ ಮಾತುಗಳಿಂದ ನಕ್ಕು ನಲಿಸಿದರು. ಕಾರಾಗೃಹಗಳು ಅಪರಾಧ ಎಸಗಿರುವವರ ಕೈದಿಗಳ ಮನ ಪರಿವರ್ತನೆಯ ಕೇಂದ್ರಗಳಾಗಬೇಕು. ಈ ನಿಟ್ಟಿನಲ್ಲಿ ಶಿವಮೊಗ್ಗದ ಕೇಂದ್ರ ಕಾರಾಗೃಹ ಒಂದು ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ಇದಕ್ಕೆ ನಿಮ್ಮ ಸಹಕಾರ ಅಗತ್ಯವಾಗಿದೆ ಎಂದು ಕೈದಿಗಳಿಗೆ ಪ್ರಾಣೇಶ್ ಕಿವಿಮಾತು ಹೇಳಿದರು.

ಓದಿ : ಇಂದು ಡಿಕೆಶಿ ಪುತ್ರಿ ಆರತಕ್ಷತೆ: ರಾಹುಲ್, ಪ್ರಿಯಾಂಕಾ ಗಾಂಧಿ ಆಗಮಿಸುವ ಸಾಧ್ಯತೆ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಶಿವಾನಂದ ಶಿವಪೂರಿ ವಹಿಸಿದ್ದರು. ಯಂಕಪ್ಪ ಕಟ್ಟಿಮನಿ ಕಾರ್ಯಕ್ರಮ ಆಯೋಜಿಸಿದ್ದರು. ಈ ವೇಳೆ ಕೇಂದ್ರ ಮಹಿಳಾ‌ ಕಾರಾಗೃಹದ ಅಧೀಕ್ಷಕಿ ಶ್ರೀಮತಿ ಅನಿತಾ ಹೀರೆಮನಿ, ಜೈಲರ್ ಗಳಾದ ಅನಿಲ್, ಸುಷ್ಮಾ ವಡಗೇರ ಹಾಗೂ ಜೈಲು ಸಿಬ್ಬಂದಿ ಹಾಜರಿದ್ದರು.

Last Updated : Feb 17, 2021, 7:47 AM IST

ABOUT THE AUTHOR

...view details