ಶಿವಮೊಗ್ಗ: ಶುಭಮಂಗಳ ಕಲ್ಯಾಣ ಮಂದಿರ ಸಮೀಪದ ಪೆಟ್ಟಿಗೆ ಅಂಗಡಿಯನ್ನು ತೆರವುಗೊಳಿಸಿ ಅಮಾಯಕ ಚಂದ್ರಶೇಖರ್ ಸಾವಿಗೆ 18 ನೇ ವಾರ್ಡ್ ಪಾಲಿಕೆ ಸದಸ್ಯ ಮತ್ತು ಅಧಿಕಾರಿಗಳು ಕಾರಣರಾಗಿದ್ದಾರೆ ಎಂದು ಆರೋಪಿಸಿ ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ಜೆಡಿಎಸ್ ಪಕ್ಷದ ವತಿಯಿಂದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಲಾಯಿತು.
ಪೆಟ್ಟಿಗೆ ಅಂಗಡಿ ಚಂದ್ರಶೇಖರ್ ಸಾವಿಗೆ ಪಾಲಿಕೆಯೇ ಕಾರಣ; ಜೆಡಿಎಸ್ ಆರೋಪ - ಮಹಾನಗರ ಪಾಲಿಕೆ ಎದುರು ಪ್ರತಿಭಟನೆ
ಲಾಂಡ್ರಿ ಅಂಗಡಿ ನಡೆಸುತ್ತಿದ್ದ ಚಂದ್ರಶೇಖರ್ ಅವರ ಅಂಗಡಿಯನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದರಿಂದ ಮಾನಸಿಕವಾಗಿ ನೊಂದು ಚಂದ್ರಶೇಖರ್ ಅವರು ಹೃದಯಾಘಾತದಿಂದ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಲಾಂಡ್ರಿ ಅಂಗಡಿ ನಡೆಸುತ್ತಿದ್ದ ಚಂದ್ರಶೇಖರ್ ಅವರ ಅಂಗಡಿಯನ್ನ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದರು. ಜೀವನಕ್ಕೆ ಆಧಾರವಾಗಿದ್ದ ಪೆಟ್ಟಿಗೆ ಅಂಗಡಿಯನ್ನು ತೆರವುಗೊಳಿಸಿದ್ದರಿಂದ ಮಾನಸಿಕವಾಗಿ ನೊಂದು ಚಂದ್ರಶೇಖರ್ ಅವರು ಹೃದಯಾಘಾತದಿಂದ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಅವರ ಸಾವಿಗೆ ಪಾಲಿಕೆ ಸದಸ್ಯರ ದುರ್ವರ್ತನೆ ಮತ್ತು ಅಧಿಕಾರಿಗಳ ವಿವೇಚನಾರಹಿತ ದುಡುಕಿನ ನಿರ್ಧಾರ ಕಾರಣವಾಗಿದೆ ಎಂದು ಆಕ್ರೋಶ ಕಾರ್ಯಕರ್ತರು ವ್ಯಕ್ತಪಡಿಸಿದರು.
ಹಾಗಾಗಿ ಸಾವನ್ನಪಿದ ಚಂದ್ರಶೇಖರ್ ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ಮೃತರ ಕುಟುಂಬಕ್ಕೆ ಹಾಗೂ ತೆರವುಗೊಳಿಸಿದ ಅಂಗಡಿಗಳ ಬಡಕುಟುಂಬಕ್ಕೆ ಬದಲಿ ಜಾಗವನ್ನು ನೀಡಬೇಕು. ಚಂದ್ರಶೇಖರ್ ಸಾವಿಗೆ ಕಾರಣರಾದ 18 ನೇ ವಾರ್ಡಿನ ಸದಸ್ಯ ತಕ್ಷಣ ರಾಜೀನಾಮೆ ನೀಡಬೇಕು. ಸಾವಿಗೆ ಕಾರಣರಾದ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಪಾಲಿಕೆಗೆ ಸಂಬಂಧಪಟ್ಟ ನಿವೇಶನಗಳಲ್ಲಿ ಅಕ್ರಮವಾಗಿ ಖಾಸಗಿ ವ್ಯಕ್ತಿಗಳು ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಿದರು.