ಕರ್ನಾಟಕ

karnataka

ETV Bharat / state

ಕಾಂಕ್ರಿಟ್ ರಸ್ತೆ ನಿರ್ಮಾಣ ಕಾರ್ಯ ವಿರೋಧಿಸಿ ಪ್ರತಿಭಟನೆ - ಶಿವಮೊಗ್ಗದಲ್ಲಿ ನಾಗರಿಕ ಹಿತಾರಕ್ಷಣಾ ವೇದಿಕೆ ಪ್ರತಿಭಟನೆ

ಕಾಂಕ್ರಿಟ್ ರಸ್ತೆ ನಿರ್ಮಾಣದಿಂದ ಆಡಳಿತ ನಡೆಸುವವರಿಗೆ ಕಾಮಗಾರಿ ಹೊರೆ ಕಡಿಮೆಯಾಗುತ್ತದೆ ಎಂದ್ಹೇಳಿ ಕಾಂಕ್ರಿಟ್ ರಸ್ತೆಗೆ ಒತ್ತು ನೀಡುತ್ತಿದ್ದಾರೆ. ಆದರೆ, ಕಾಂಕ್ರಿಟ್ ರಸ್ತೆಯಿಂದ ಪರಿಸರದ ಮೇಲೆ ವ್ಯಕ್ತಿರಿಕ್ತ ಪರಿಣಾಮ ಬಿರುತ್ತದೆ..

ಕಾಂಕ್ರಿಟ್ ರಸ್ತೆ ನಿರ್ಮಾಣ ಕಾರ್ಯ ವಿರೋಧಿಸಿ ಪ್ರತಿಭಟನೆ
Nagarika Hitharakshana vedike protest against concrete road work

By

Published : Feb 1, 2021, 3:47 PM IST

Updated : Feb 1, 2021, 4:03 PM IST

ಶಿವಮೊಗ್ಗ :ಸ್ಮಾರ್ಟ್ ಸಿಟಿ‌ ಹೆಸರಿನಲ್ಲಿ ನಗರದ ಹಲವು ಕಡೆ ಅನಾವಶ್ಯಕವಾಗಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡುತ್ತಿರುವುದನ್ನು ಖಂಡಿಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಪ್ರತಿಭಟಿಸಿತು.

ಕಾಂಕ್ರಿಟ್ ರಸ್ತೆ ನಿರ್ಮಾಣ ಕಾರ್ಯ ವಿರೋಧಿಸಿ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡಸಿದ ಒಕ್ಕೂಟದ ಕಾರ್ಯಕರ್ತರು, ಪಾಲಿಕೆ ವ್ಯಾಪ್ತಿಯ 24 ವಾರ್ಡ್​​ಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಆದರೆ, ಈ ವಾರ್ಡ್​​ಗಳಲ್ಲಿ ಅನಾವಶ್ಯಕ ಕಾಂಕ್ರಿಟ್ ರಸ್ತೆ ಮಾಡಲಾಗುತ್ತಿದೆ. ಇದರಿಂದ ಹಣ ಪೋಲಾಗುತ್ತಿದೆ ಎಂದು ಆರೋಪಿಸಿದರು.

ಕಾಂಕ್ರಿಟ್ ರಸ್ತೆ ನಿರ್ಮಾಣದಿಂದ ಆಡಳಿತ ನಡೆಸುವವರಿಗೆ ಕಾಮಗಾರಿ ಹೊರೆ ಕಡಿಮೆಯಾಗುತ್ತದೆ ಎಂದ್ಹೇಳಿ ಕಾಂಕ್ರಿಟ್ ರಸ್ತೆಗೆ ಒತ್ತು ನೀಡುತ್ತಿದ್ದಾರೆ. ಆದರೆ, ಕಾಂಕ್ರಿಟ್ ರಸ್ತೆಯಿಂದ ಪರಿಸರದ ಮೇಲೆ ವ್ಯಕ್ತಿರಿಕ್ತ ಪರಿಣಾಮ ಬಿರುತ್ತದೆ.

ಈ ರಸ್ತೆಯಿಂದ ತಾಪಮಾನ ಹೆಚ್ಚಾಗುತ್ತದೆ. ಇದು ಪರಿಸರದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುತ್ತದೆ. ಇದರಿಂದ ತಕ್ಷಣ ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ನಿಲ್ಲಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರುದ್ರಪ್ಪ, ಪ್ರಧಾನ ಕಾರ್ಯದರ್ಶಿ ವಸಂತಕುಮಾರ್, ಸಂಘಟನಾ ಕಾರ್ಯದರ್ಶಿ ಡಾ.ಎ.ಸತೀಶ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಅಶೋಕ್​ ಕುಮಾರ್ ಸೇರಿದಂತೆ ಇತರಿದ್ದರು.

Last Updated : Feb 1, 2021, 4:03 PM IST

ABOUT THE AUTHOR

...view details