ಕರ್ನಾಟಕ

karnataka

ETV Bharat / state

ಕೊಲೆಗೆ ಸುಪಾರಿ, ಬೆದರಿಕೆ ಆರೋಪ: ರಿವಾಲ್ವರ್​​ ಸಮೇತ 6 ಮಂದಿಯ ಬಂಧನ - undefined

ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆ ಹಾಗೂ ತುಂಗಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರತ್ಯೇಕ ಪ್ರಕರಣಗಳಲ್ಲಿ ರಿವಾಲ್ವರ್ ಸಮೇತ ಒಟ್ಟು ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸುಪಾರಿ ಕೊಲೆ, ಬೆದರಿಕೆ ಆರೋಪ

By

Published : Jul 18, 2019, 8:08 PM IST

ಶಿವಮೊಗ್ಗ: ಹತ್ಯೆಗೆ ಸುಪಾರಿ ಹಾಗೂ ಬೆದರಿಕೆ ಸೇರಿ‌ ಎರಡು ಪ್ರಕರಣದಲ್ಲಿ ರಿವಾಲ್ವರ್ ಸಮೇತ ಒಟ್ಟು ಆರು ಜನ ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.

ಕೊಲೆಗೆ ಸುಪಾರಿ, ಬೆದರಿಕೆ ಆರೋಪ: ರಿವಾಲ್ವರ್ ಸಮೇತ 6 ಆರೋಪಿಗಳ ಬಂಧನ

ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆ ಹಾಗೂ ತುಂಗಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರತ್ಯೇಕ ಪ್ರಕರಣಗಳಲ್ಲಿ ಸಾಥಿಕ್ ಅಲಿಯಾಸ್ ಸಾತು ಮತ್ತು ಆತನ ಗ್ಯಾಂಗ್ ಅಂದರ್ ಆಗಿದೆ. ಇನ್ನು ರಿಯಲ್ ಎಸ್ಟೇಟ್ ಉದ್ಯಮಿ ಕೊಲೆಗೆ ಸುಪಾರಿ ನೀಡಿದ್ದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ಹಾಗೂ ರಿಯಲ್‌ ಎಸ್ಟೇಟ್ ಉದ್ಯಮಿ ಕಲೀಂವುಲ್ಲಾನನ್ನು ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ಗಾಂಧಿ ಬಜಾರ್​​ನ ಚಿನ್ನ-ಬೆಳ್ಳಿ ವ್ಯಾಪಾರಿ ಅನೀಸುರ್ ಇಸ್ಲಾಂನನ್ನು ಸಾತು ಗ್ಯಾಂಗ್​​ನ ಅತಿಕ್ ಎಂಬಾತ ಬೈಕ್​​ನಲ್ಲಿ ಹೊಳಲೂರಿನ ಸಮೀಪ ಕರೆದುಕೊಂಡು ಹೋಗಿದ್ದಾರೆ. ನಂತರ ಅಲ್ಲಿದ್ದ ಸಾತು ಗ್ಯಾಂಗ್ ಅನೀಸುರ್​ಗೆ ರಿಲಾಲ್ವರ್ ತೋರಿಸಿ, ಬೆದರಿಸಿ ಹಲ್ಲೆ ಮಾಡಿ ಆತನಿಂದ 3 ಸಾವಿರ‌ ರೂ. ನಗದು ಕಸಿದುಕೊಂಡು ಅಲ್ಲಿಂದ ಕಳುಹಿಸಿದ್ದಾರೆ. ಅನಂತರ ಅಲ್ಲಿಂದ ಬಂದ ಅನೀಸುರ್ ಇಸ್ಲಾಂ ತಕ್ಷಣ ಕೋಟೆ ಪೊಲೀಸರಿಗೆ ದೂರು ನೀಡಿದ್ದಾರೆ.

ಇನ್ನು ದೂರು ದಾಖಲಿಸಿಕೊಂಡ ಪೊಲೀಸರು, ಈ ಬಗ್ಗೆ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಈ ಫಲಿತಾಂಶ ಇಂದು ಬೆಳಗ್ಗೆ ವಡ್ಡಿನಕೊಪ್ಪದ ಬಳಿ ಸಾಧಿಕ್, ಅತಿಕ್, ಬಳ್ಳಾರಿಯ ದಾದಾಪೀರ್, ಮುಂಬೈನ ಆಂಜೋಲಾ ಫರ್ನಾಂಡಿಸ್ ಹಾಗೂ ಕಾರು ಚಾಲಕ ಕುಮಾರ ಗೌಡ ಎಂಬುವರನ್ನು ಬಂಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೆ ಅಲ್ಲದೆ, ಇವರಿಂದ ಒಂದು ರಿವಾಲ್ವರ್ ಹಾಗೂ‌ ಎರ್ಟಿಗಾ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರಿಯಲ್‌ ಎಸ್ಟೆಟ್ ಉದ್ಯಮಿ ಹತ್ಯೆಗೆ ಇನ್ನೋರ್ವ ರಿಯಲ್‌ಎಸ್ಟೆಟ್ ಉದ್ಯಮಿಯಿಂದ ಸುಪಾರಿ‌:

ಶಿವಮೊಗ್ಗ ಪ್ರಸಿದ್ಧ ರಿಯಲ್ ಎಸ್ಟೆಟ್ ಉದ್ಯಮಿಯಾದ ಹಬೀಬ್ ಖಾನ್ ಅಲಿಯಾಸ್ ಎಒನ್ ಹಬೀಬ್ ಎಂಬುವರನ್ನು ಕೊಲೆ ಮಾಡಲು ಇನ್ನೋರ್ವ ರಿಯಲ್‌ ಎಸ್ಟೆಟ್ ಉದ್ಯಮಿ ಕಲೀಂವುಲ್ಲಾ ಹಾಗೂ ಸಾತುವಿಗೆ ಸುಪಾರಿ ನೀಡಿದ್ದ ಎನ್ನಲಾಗಿದೆ. ಈ ಹಿನ್ನೆಲೆ ಇದೇ ತಿಂಗಳ 16ರಂದು ಹಬೀಬ್ ಮನೆಗೆ ತೆರಳುತ್ತಿದ್ದಾಗ ಸಾತು, ಚಾಲುಕ್ಯ ನಗರದಲ್ಲಿ ಹಬೀಬ್​ ಕಾರನ್ನು ಅಡ್ಡಗಟ್ಟಿ ಎದೆಗೆ ರಿವಾಲ್ವರ್ ಇಟ್ಟು ಬೆದರಿಸಿದ್ದನಂತೆ. ಸದ್ಯ ಈ ವೇಳೆ ಹಬೀಬ್ ಸ್ನೇಹಿತರು ಬಂದ ಪರಿಣಾಮ ಸಾತು ಅಲ್ಲಿಂದ ಎರ್ಟಿಗಾ ಕಾರಿನಲ್ಲಿ ಪರಾರಿಯಾಗಿದ್ದ ಎನ್ನಲಾಗಿದೆ.

For All Latest Updates

TAGGED:

ABOUT THE AUTHOR

...view details