ಶಿವಮೊಗ್ಗ: ಶರಾವತಿ ಹಿನ್ನೀರಿನಲ್ಲಿ ವೃದ್ಧ ದಂಪತಿ ಕೊಲೆ ನಡೆದಿದೆ. ಸಾಗರ ತಾಲೂಕಿನ ಬ್ಯಾಕೋಡು ಗ್ರಾಮದಲ್ಲಿ ಘಟನೆ ನಡೆದಿದೆ.
ಶರಾವತಿ ಹಿನ್ನೀರಿನ ಬಳಿ ವೃದ್ಧ ದಂಪತಿ ಕೊಲೆ - shivmogga news
ವೃದ್ಧ ದಂಪತಿ ಮನೆಯಲ್ಲಿದ್ದಾಗ ಯಾರೋ ದುಷ್ಕರ್ಮಿಗಳು ಈ ಹತ್ಯೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಕೊಲೆಗೆ ನಿಖರ ಕಾರಣ ತಿಳಳಿದು ಬಂದಿಲ್ಲ.
![ಶರಾವತಿ ಹಿನ್ನೀರಿನ ಬಳಿ ವೃದ್ಧ ದಂಪತಿ ಕೊಲೆ Murder of couple near Sharawati Backwaters](https://etvbharatimages.akamaized.net/etvbharat/prod-images/768-512-8781509-thumbnail-3x2-nin.jpg)
ಶರಾವತಿ ಹಿನ್ನೀರಿನ ಬಳಿ ವೃದ್ಧ ದಂಪತಿಗಳ ಕೊಲೆ
ಸುಂದರ ಶೇಟ್(88) ಹಾಗೂ ಸುಲೋಚನಾ ಶೇಟ್(79) ಕೊಲೆಯಾದ ವೃದ್ಧರು. ದಂಪತಿ ಮನೆಯಲ್ಲಿದ್ದಾಗ ಅಪರಿಚಿತರು ಕೊಲೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಸುಂದರ ಶೇಟ್ ಹಿಂದೆ ಬಂಗಾರದ ಅಂಗಡಿ ನಡೆಸುತ್ತಿದ್ದರು.
ಕೊಲೆಯಾದ ದಂಪತಿಗೆ ಮೂವರು ಮಕ್ಕಳಿದ್ದು, ಇಬ್ಬರು ಗಂಡು ಮಕ್ಕಳು ಕುಂದಾಪುರದಲ್ಲಿ ಬಂಗಾರದ ಅಂಗಡಿ ನಡೆಸುತ್ತಿದ್ದಾರೆ. ಮಗಳಿಗೆ ಮದುವೆ ಮಾಡಿ ಕೊಟ್ಟಿದ್ದಾರೆ. ಸುಂದರಶೇಟ್ ರವರು ತಮ್ಮ ಅಡಿಕೆ ತೋಟದಲ್ಲಿಯೇ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಕಾರ್ಗಲ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Last Updated : Sep 13, 2020, 6:27 AM IST