ಕರ್ನಾಟಕ

karnataka

ETV Bharat / state

ಕೊಲೆ ಯತ್ನ ಪ್ರಕರಣ: ಅಪ್ರಾಪ್ತರು ಸೇರಿ ಐವರ ಬಂಧನ - including minors

ಹಲ್ಲೆಗೊಳಗಾಗಿರುವ ರಾಕೇಶ್(22) ಹಾಗೂ ರವಿ ಕುಮಾರ್(24) ರಸ್ತೆ ಪಕ್ಕದಲ್ಲಿ ನಿಂತಿದ್ದಾಗ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಇದರಲ್ಲಿ ರಾಕೇಶನಿಗೆ ತೀವ್ರ ಗಾಯಗಳಾಗಿದ್ದು, ಈತನನ್ನು ಮಣಿಪಾಲ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಬಂಧನ
ಬಂಧನ

By

Published : Feb 18, 2021, 9:36 PM IST

ಶಿವಮೊಗ್ಗ: ನಗರದ ಮಾರ್ನಾಮಿ ಬೈಲ್​ನಲ್ಲಿ ಕಳೆದ ಎರಡು ದಿನದ ಹಿಂದೆ ಯುವಕರಿಬ್ಬರ ‌ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ ಐದು ಮಂದಿ ಆರೋಪಿಗಳನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.

ವಸೀಂ(19), ವಸೀಂ ಅಕ್ರಂ(19), ಉಮರ್ ಖಾನ್(19), ಉಳಿದಿಬ್ಬರು ಅಪ್ರಾಪ್ತ ಆರೋಪಿಗಳಾಗಿದ್ದಾರೆ. ಹಲ್ಲೆಗೊಳಗಾಗಿರುವ ರಾಕೇಶ್(22) ಹಾಗೂ ರವಿ ಕುಮಾರ್(24) ರಸ್ತೆ ಪಕ್ಕದಲ್ಲಿ ನಿಂತಿದ್ದಾಗ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಇದರಲ್ಲಿ ರಾಕೇಶನಿಗೆ ತೀವ್ರ ಗಾಯಗಳಾಗಿದ್ದು, ಈತನನ್ನು ಮಣಿಪಾಲ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಕೊಲೆ ಯತ್ನ ಪ್ರಕರಣದಲ್ಲಿ ಅಪ್ರಾಪ್ತರು ಸೇರಿ ಐವರ ಬಂಧನ

ಬಂಧಿತರಲ್ಲಿ ವಸೀಂ ಈಗಾಗಲೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಘಟನೆ ನಡೆದ ಒಂದು ದಿನದಲ್ಲೇ ಆರೋಪಿಗಳನ್ನು ಬಂಧನ ಮಾಡಿರುವ ದೊಡ್ಡಪೇಟೆ ಪೊಲೀಸರಿಗೆ ಎಸ್​ಪಿ ಕೆ.ಎಂ.ಶಾಂತರಾಜು ಅಭಿನಂದನೆ ಸಲ್ಲಿಸಿದ್ದಾರೆ. ಇದು ಹುಡುಗಿಯ ವಿಚಾರವಾಗಿ ನಡೆದ ಹಲ್ಲೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details