ಶಿವಮೊಗ್ಗ: ಕೈದಿಯೊಬ್ಬನು ನಗರದ ಕೇಂದ್ರ ಕಾರಾಗೃಹದಲ್ಲಿ ತಾನಿದ್ದ ಜೈಲಿನ ಸೆಲ್ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೊಲೆ ಆರೋಪಿ ಕರುಣಾಕರ ದೇವಾಡಿಗ(24) ಎಂಬಾತನೇ ಆತ್ಮಹತ್ಯೆ ಮಾಡಿಕೊಂ ಕೈದಿ ಆಗಿದ್ದಾನೆ. ಇಂದು ಬೆಳಗ್ಗೆ ಕರುಣಾಕರ ದೇವಾಡಿಗ ಕೈದಿ ಜೈಲ್ ತನ್ನ ಸೆಲ್ ನ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಬೆಳಗ್ಗೆ ಜೈಲ್ ನಲ್ಲಿ ತಿಂಡಿಗೆಂದು ಬಿಟ್ಟಿರುವ ವೇಳೆ ಕೈದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಕೈದಿ ಮೇಲೆ ಆರೋಪ ಏನೂ:ಭದ್ರಾವತಿ ತಾಲೂಕು ಸುಣ್ಣದ ಹಳ್ಳಿಯ ಆಂಜನೇಯ ದೇವಾಲಯದ ಮುಂಭಾಗ ವೃದ್ದೆಯೊಬ್ಬರು ಭಿಕ್ಷೆ ಬೇಡಿಕೊಂಡು ದೇವಾಲಯದ ಆವರಣದಲ್ಲಿಯೇ ವಾಸ ಮಾಡುತ್ತಿದ್ದರು. ಕೈದಿ ಕರುಣಾಕರ ದೇವಾಡಿಗ ದೇವಾಲಯದ ಹುಂಡಿ ಕಳ್ಳತನಕ್ಕೆ ಎಂದು ಬಂದು, ಅಲ್ಲಿದ್ದ ಅಜ್ಜಿಯ ಮೈ ಮೇಲಿನ ಒಡವೆ ನೋಡಿ ಕೊಲೆ ಮಾಡಿ ಪರಾರಿಯಾಗಿದ್ದ.
ಈತನನ್ನು ಭದ್ರಾವತಿ ಪೇಪರ್ ಟೌನ್ ಪೊಲೀಸರು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದ ಆಧಾರದ ಮೇಲೆ ಕೊಲೆ ಆರೋಪಿ ಕರುಣಾಕರ ದೇವಾಡಿಗನನ್ನು ಬಂಧಿಸಿದ್ದರು. ಕೊಲೆ ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಈತನು ಮೂಲತಃ ಉಡುಪಿ ಜಿಲ್ಲೆಯವ. ಹಾಲಿ ಭದ್ರಾವತಿಯಲ್ಲೆ ವಾಸವಾಗಿದ್ದನು. ಈತ ಜೈಲಿಗೆ ಸೇರಿದ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಇದಕ್ಕಾಗಿ ಜೈಲ್ ನಲ್ಲಿನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೇಯಸಿಯನ್ನು ಹತ್ಯೆ ಮಾಡಿದ್ದ ಪ್ರಿಯಕರ ಅಂದರ್:ಅನೈತಿಕಸಂಬಂಧವನ್ನು ಮರೆಮಾಚಲು ಪ್ರಿಯಕರನ ನಿರ್ಧಾರಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಲು ಮುಂದಾಗಿದ್ದ ಪ್ರೇಯಸಿಯನ್ನು ಪ್ರಿಯಕರ ಹತ್ಯೆ ಮಾಡಿರುವ ಪ್ರಕರಣ ಬೆಂಗಳೂರಿನ ಬಸವೇಶ್ವರ ನಗರ ಠಾಣೆ ವ್ಯಾಪ್ತಿ ಜರುಗಿದೆ. ಸರಗುಣಂ (35) ಹತ್ಯೆಗೆ ಒಳಗಾದ ಮಹಿಳೆ. ಈ ಸಂಬಂಧ ಗಣೇಶ್(22) ಎಂಬ ಆರೋಪಿಯನ್ನು ಬೆಂಗಳೂರಿನ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.