ಕರ್ನಾಟಕ

karnataka

ETV Bharat / state

ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬಕ್ಕೆ ಸೇವಾ ಪಾಕ್ಷಿಕ ಆಚರಣೆ: ಸಂಸದ ರಾಘವೇಂದ್ರ - MP Raghavendra speak about modi birthday

ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ಹಿನ್ನೆಲೆ ಸೇವಾ ಪಾಕ್ಷಿಕವನ್ನು ಆಚರಿಸಲಾಗುತ್ತದೆ ಎಂದು ಶಿವಮೊಗ್ಗದಲ್ಲಿ ಸಂಸದ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.

ಸಂಸದ ಬಿ ವೈ ರಾಘವೇಂದ್ರ
ಸಂಸದ ಬಿ ವೈ ರಾಘವೇಂದ್ರ

By

Published : Sep 15, 2022, 4:46 PM IST

ಶಿವಮೊಗ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನವನ್ನು ಸೇವಾ ಪಾಕ್ಷಿಕವಾಗಿ ಆಚರಿಸಲು ಬಿಜೆಪಿ ನಿರ್ಧರಿಸಿದೆ. ಈ ಹಿನ್ನೆಲೆ ಸೆ.17 ರಿಂದ ಅ. 2 ರ ತನಕ ದೇಶದಲ್ಲಿ ಬಿಜೆಪಿ ವಿವಿಧ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದೆ ಎಂದು ಶಿವಮೊಗ್ಗದಲ್ಲಿ ಸಂಸದ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿಗಳು ತಮ್ಮ ಜೀವನವನ್ನು ಜನರ ಸೇವೆಗೆ ಮೀಸಲಿಟ್ಟಿದ್ದಾರೆ. ಹಾಗಾಗಿ ಸೆ.17 ರಿಂದ ಮೋದಿಯವರ ಜೀವನ ಹಾಗೂ ಗುರಿಯ ಕುರಿತು ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದಲಿ ಜನರಿಗೆ ತಿಳಿಸಿಕೊಡಲಾಗುವುದು ಎಂದು ಅವರು ಹೇಳಿದರು.

ಪುಸ್ತಕ ಬಿಡುಗಡೆ: ಜನ ಕಲ್ಯಾಣಕ್ಕಾಗಿ ಮೋದಿಯವರ ಶ್ರಮದ ಕುರಿತು ಮೋದಿ@20 ಡ್ರಿಮ್‌ಮೀಟ್ ಡೆಲವರಿ ಎಂಬ ಪುಸ್ತಕ ಬಿಡುಗಡೆ ಮಾಡಿಸಿ ಪ್ರತಿ ಮನೆ ಮನೆಗೂ ಹಂಚಲಾಗುವುದು. ಉಚಿತ ಆರೋಗ್ಯ ಶಿಬಿರದ ಜೊತೆಗೆ ಯಾರು ಬೂಸ್ಟರ್ ಡೋಸ್ ಪಡೆದಿಲ್ಲ ಅವರಿಗೆ ಪ್ರತಿ ಬೂತ್ ಮಟ್ಟದಿಂದ ಕರೆದುಕೊಂಡು ಹೋಗಿ ಬೂಸ್ಟರ್ ಡೋಸ್ ಹಾಕಿಸಲಾಗುವುದು. ರಕ್ತದಾನ ಶಿಬಿರವನ್ನು ಆಯೋಜಿಸಲಾಗುವುದು ಎಂದರು.

ವಿಕಲಚೇತನರಿಗೆ ಶಿಬಿರ ನಡೆಸಿ, ಉಚಿತ ಸಲಕರಣೆಗಳನ್ನು ನೀಡಲಾಗುವುದು. ಕ್ಷಯ ರೋಗ ನಿರ್ಮೂಲನೆಗಾಗಿ ಶ್ರಮಿಸುವುದು ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತರುವ ಬಗ್ಗೆ ಮಾಹಿತಿ ನೀಡಿದರು. ಪ್ರಕೃತಿ ಹಸಿರುಗೊಳಿಸುವ ಸಲುವಾಗ ಸಸಿ ನೆಡುವ ಕಾರ್ಯಕ್ರಮ, ಸ್ವಚ್ಚತಾ ಅಭಿಯಾನ, ಜಲಮೂಲಗಳ ರಕ್ಷಣೆ, ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಯ ಮೂಲಕ ಜನರಲ್ಲಿ‌ ಆರೋಗ್ಯದ ಅರಿವು ಮೂಡಿಸುವ ಸೇರಿದಂತೆ ಇತರ ಕಾರ್ಯ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು.

ಮೂರು ನಾಯಕರು ಹುಟ್ಟುಹಬ್ಬ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬ ಸೆ.17 ರಂದು ಇದೆ.‌ ಅಕ್ಟೊಂಬರ್ 25 ರಂದು ಬಿಜೆಪಿ‌ ಸಂಸ್ಥಾಪಕ ಪಂಡಿತ್ ದಿನ್ ದಯಾಳ್ ಹುಟ್ಟು ಹಬ್ಬ ಹಾಗೂ ಅ. 2 ರಂದು ಮಹಾತ್ಮ ಗಾಂಧೀಜಿ ಅವರ ಹುಟ್ಡು ಹಬ್ಬವಿದೆ. ಹೀಗಾಗಿ ಈ ಮೂರು ಜನ ಮಹಾನ್ ನಾಯಕರ ಬರ್ತಡೇ ಇರುವುದರಿಂದ ಸೇವಾ ಪಾಕ್ಷಿಕ ದಿನವನ್ನು ಆಚರಿಸಲಾಗುತ್ತದೆ. ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ:ಪ್ರಧಾನಿ ನರೇಂದ್ರ ಮೋದಿ ಜನ್ಮದಿನ: 16 ದಿನ ಬಿಜೆಪಿಯಿಂದ ಸೇವಾ ಪಾಕ್ಷಿಕ

ನಂತರ ಮಾತನಾಡಿದ ಜಿಲ್ಲಾ ಬಿಜೆಪಿ‌ ಅಧ್ಯಕ್ಷ ಟಿ ಡಿ ಮೇಘರಾಜ್ ಅವರು, ನಮ್ಮದು ಸಮಾನತೆಯನ್ನು ಸಾರುವ ಪಾರ್ಟಿ. ಮೊನ್ನೆ ಹಿಂದು ಮಹಾಸಭಾ ವತಿಯಿಂದ ಗಣೇಶ ಮೂರ್ತಿ ನಿಮ್ಮಜನ ಮೆರವಣಿಗೆ ವೇಳೆ ಗೋಡ್ಸೆ ಫೋಟೋ ಹಿಡಿದು ನೃತ್ಯ ಮಾಡಿದನ್ನು ಖಂಡಿಸಿದರು. ನಮ್ಮ ರಕ್ತದ ಕಣ ಕಣದಲ್ಲಿ ಗಾಂಧೀಜಿ ಇದ್ದಾರೆ ಎಂದು ಹೇಳಿದರು.

ABOUT THE AUTHOR

...view details