ಶಿವಮೊಗ್ಗ: ಸಿಎಂ, ಎಂಪಿ ಸ್ಥಾನ ಯಾವುದೇ ಆಗಲಿ. ನಮಗೆ ನಮ್ಮ ಪಕ್ಷ ಸಂಘಟನೆ ಮುಖ್ಯ. ಎಲ್ಲಿಯವರೆಗೆ ಹೈಕಮಾಂಡ್ಗೆ ವಿಶ್ವಾಸ ಇರುತ್ತದೆಯೋ ಅಲ್ಲಿಯವರೆಗೂ ನಾನು ಆ ಸ್ಥಾನದಲ್ಲಿ ಇರುತ್ತೇನೆ ಎಂದು ಸಿಎಂ ಬಿಎಸ್ವೈ ಹೇಳಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲವೆಂದು ಸಂಸದ ಬಿ ವೈ ರಾಘವೇಂದ್ರ ಅವರು ಸಿಎಂ ರಾಜೀನಾಮೆ ವಿಚಾರ ಕುರಿತು ಪ್ರತಿಕ್ರಿಯಿಸಿದ್ದಾರೆ.
ಸಂಸದ ಬಿ. ವೈ ರಾಘವೇಂದ್ರ ಪ್ರತಿಕ್ರಿಯೆ ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸಂಘಟನೆಯಲ್ಲಿ ಹೇಳಿಕೊಟ್ಟಿರುವುದು ದೇಶ ಮೊದಲು, ನಂತರ ಪಕ್ಷ, ಆಮೇಲೆ ವ್ಯಕ್ತಿ ಎಂದರು.
ಈಗ ರಾಜೀನಾಮೆ ನೀಡುವಂತಹ ಸಂದರ್ಭ ಬಂದಿಲ್ಲ. ಕೋವಿಡ್ ನಂತಹ ಸಂಕಷ್ಟ ಸಂದರ್ಭದಲ್ಲಿ ಸಾವು-ನೋವನ್ನು ತಡೆಯಲು ನಿರಂತರ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ರೀತಿಯ ಸಮಸ್ಯೆ ಪರಿಹರಿಸಲು ಸಿಎಂ, ಸಚಿವರು ಶ್ರಮಿಸುತ್ತಿದ್ದಾರೆ. ಕುಟುಂಬ(ಬಿಜೆಪಿ) ಅಂದ ಮೇಲೆ ಇದೆಲ್ಲಾ ಇದ್ದದ್ದೇ. ಯಾವುದೇ ಮನೆಯಲ್ಲಿ ಅಧಿಕಾರ, ಆಸ್ತಿ ಅಂತ ಬಂದಾಗ ಬದಲಾವಣೆಯಂತಹ ಮಾತುಗಳು ಕೇಳಿಬರುವುದು ಸಾಮಾನ್ಯ ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ.
ಓದಿ:ದೂರದೃಷ್ಟಿ ಯೋಜನೆಗಳನ್ನು ಜಾರಿಗೆ ತಂದ ಧೀಮಂತ ವ್ಯಕ್ತಿ ದೇವರಾಜ ಅರಸು ; ಸಿಎಂ ಬಿಎಸ್ವೈ