ಶಿವಮೊಗ್ಗ: ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಗುಂಡಾಗಿರಿ ಬಿಟ್ಟು ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಕುಟುಕಿದ್ದಾರೆ.
ಶಾಸಕ ಸಂಗಮೇಶ್ ಗೂಂಡಾಗಿರಿ ಬಿಟ್ಟು ಅಭಿವೃದ್ಧಿಗೆ ಸಹಕರಿಸಿ: ಸಂಸದ ಬಿ.ವೈ.ರಾಘವೇಂದ್ರ - Sangamesh
ಸದನದಲ್ಲಿ ಸ್ಪೀಕರ್ ಸ್ಥಾನ ಪವಿತ್ರವಾದದ್ದು, ಸ್ಪೀಕರ್ ಆದೇಶಕ್ಕೆ ಸಹ ಅವರು ಬೆಲೆಕೊಡುತ್ತಿಲ್ಲ ಮಾಜಿ ಸಿಎಂ ಸಿದ್ದರಾಮಯ್ಯ ಏಕವಚನದಲ್ಲಿ ಮಾರ್ಷಲ್ಗಳಿಗೆ ಮಾತನಾಡಿದ್ದಾರೆ. ಸದನದಲ್ಲಿ ಸರಿ ತಪ್ಪುಗಳ ಚರ್ಚೆ ಆಗಬೇಕು.
ನಗರದಲ್ಲಿ ಮಾತನಾಡಿದ ಅವರು, ವಿಧಾನಸಭಾ ಅಧಿವೇಶನ ಕಳೆದ 3 ದಿನಗಳಿಂದ ನಡೆಯುತ್ತಿದೆ. ದೊಡ್ಡ ಪ್ರಜಾಪ್ರಭುತ್ವದ ದೇಶದಲ್ಲಿ ಒಂದು - ದೇಶ ಒಂದು ಚುನಾವಣೆಯ ಬಗ್ಗೆ ಚರ್ಚೆ ಮಾಡಲಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಕ್ಷುಲ್ಲಕ ಕಾರಣಕ್ಕೆ ಸಭಾಪತಿಗೆ ಅಗೌರವ ತೋರಿಸಿದ್ದಾರೆ.
ಭದ್ರಾವತಿಯ ಕಬ್ಬಡಿ ಪಂದ್ಯಾವಳಿಯಲ್ಲಿ ಆಯೋಜಕರು ಕ್ರೀಡಾಮನೋಭಾವದಿಂದ ನಡೆದುಕೊಂಡಿಲ್ಲ. ಬಿಜೆಪಿ ಪದಾಧಿಕಾರಿಗಳ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿದ್ದಾರೆ. ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಕ್ಕೆ ಶಾಸಕರ ಸಮ್ಮುಖದಲ್ಲೇ ಹಲ್ಲೆ ನಡೆದಿದೆ. ಇಲ್ಲಿ ಘೋಷಣೆ ಕೂಗದೇ ಪಾಕಿಸ್ತಾನದಲ್ಲಿ ಹೋಗಿ ಘೋಷಣೆ ಕೂಗಲು ಸಾಧ್ಯ. ಭದ್ರಾವತಿ ವಿಚಾರದಲ್ಲಿ ನಾವು ಅಧಿಕಾರ ದುರ್ಬಳಕೆ ಮಾಡಿಲ್ಲ. ಪೊಲೀಸರು ಅವರು ಕರ್ತವ್ಯ ಮಾಡಿದ್ದಾರೆ ಎಂದರು.